ಸಭೆ

ಸುಂದರನಗರ: ಹಕ್ಕುಪತ್ರ ವಿತರಣೆ ಸಂಬಂಧ ಶೀಘ್ರದಲ್ಲೇ ಸರ್ವೆ ಭರವಸೆ

ಕುಶಾಲನಗರ, ಮಾ 17: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆಯಲ್ಲಿನ‌ ಹಕ್ಕುಪತ್ರ ವಂಚಿತ ನಿವಾಸಿಗಳ ಬೇಡಿಕೆಗೆ ತಹಸೀಲ್ದಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸರ್ವೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ ಎಂದು ಹಕ್ಕುಪತ್ರ ವಂಚಿತ ನಿವಾಸಿಗಳು ಆಶಾಭಾವನೆ ವ್ಯಕ್ತಪಡಿಸಿದರು.
ಹಕ್ಕುಪತ್ರ ಸಂಬಂಧ ರಚಿಸಿರುವ ಸಮಿತಿ ಸಭೆಯಲ್ಲಿ ಹೋರಾಟದ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ನಿವಾಸಿಎ ಚರ್ಚಿಸಿದರು.
ಹೋರಾಟದ ನೇತೃತ್ವ ವಹಿಸಿರುವ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು ಮಾತನಾಡಿ, ಕಳೆದ 5 ದಶಕಗಳಿಂದ ಅಧಿಕ ಕಾಲ ಇಲ್ಲಿ ವಾಸವಿರುವ ಕುಟುಂಬಗಳು ಹಕ್ಕುಪತ್ರ ಸೌಲಭ್ಯದಿಂದ ವಂಚಿತರಾಗಿರುವ ಕಾರಣ ಸಮಿತಿ ರಚಿಸಿ ಹೋರಾಟ ಆರಂಭಿಸಲಾಗಿದೆ. ತಹಸೀಲ್ದಾರ್ ಕೂಡ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ‌ಸರ್ವೆ ಬಳಿಕ‌ ಶಾಸಕರು, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿ ವಸ್ತುಸ್ಥಿತಿ ವಿವರಿಸಲಾಗುವುದು ಎಂದು ತಿಳಿಸಿದರು.

ನಮ್ಮ ಹೋರಾಟ ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದು ತಹಸೀಲ್ದಾರ್ ಅವರ ಭರವಸೆ ನಮ್ಮಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸರ್ವೆ ಬಳಿಕ ಹಕ್ಕುಪತ್ರ ದೊರಕುವ ಬಗ್ಗೆ ಭರವಸೆ ಇರುವುದಾಗಿ ನಿವಾಸಿ ರೇಷ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಸಮಿತಿ
ವಿಜಯ್, ಮಂಜು ಕುಟ್ಟಿ,
ಕವಿತಾ, ಸಂಧ್ಯಾ ಕಾವೇರಪ್ಪ, ಮಹದೇವಮ್ಮ, ಭಾರತಿ, ಕುಸುಮ, ದೀಪಿಕಾ, ಮುತ್ತು ಲಕ್ಷ್ಮಿ, ದೇವಿಕಾ, ಭವ್ಯ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!