ಕುಶಾಲನಗರ, ಅ 11: ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕು ಮಳಲಿ ಗ್ರಾಮದಲ್ಲಿ ತಮಯ್ಯ ಬಿನ್ ದ್ಯಾವರಸನಾಯಕ ರವರು ತೋಟದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಕುಟುಂಬ ಸಮೇತ ವಾಸವಿರುತ್ತಾರೆ ಕುಟುಂಬ ಸಮೇತ ಈ ಮನೆಗೆ ಹೊಂದಿಕೊಂಡಂತೆ ಕೊಟ್ಟಿಗೆಯನ್ನು ಕೂಡ ನಿರ್ಮಾಣ ಮಾಡಿಕೊಂಡಿದ್ದು ಕೊಟ್ಟಿಗೆಯಲ್ಲಿ ದಿನಾಂಕ 9.10. 2022 ರಂದು ರಾತ್ರಿ ಟಗರುನ್ನು ಕಟ್ಟಿಹಾಕಿದ್ದು ರಾತ್ರಿವೇಳೆಯಲ್ಲಿ ಕಾಡಿನಿಂದ ಚಿರತೆ ಬಂದು ಕೊಟ್ಟಿಗೆಯಲ್ಲಿದ್ದ ಸುಮಾರು 35 ಕೆಜಿ ತೂಕ ಬಾಳುವ ಟಗರುನ್ನು ಕಚ್ಚಿಕೊಂಡ ಕಾಲುದಾರಿ ಮೇಲೆ ಕೊಂದು ಹಾಕಿ ತಿಂದು ಹೊರಟು ಹೋಗಿರುತ್ತದೆ. ಇದರಿಂದ ತಮ್ಮಯ್ಯ ರವರಿಗೆ 25 ಸಾವಿರ ರೂ ನಷ್ಟ ಉಂಟಾಗಿದ್ದು ಈ ಚಿರತೆಯೋ ಈಗಾಗಲೇ ಮಳಲಿ ಗ್ರಾಮದಲ್ಲಿ ಸುಮಾರು ಹದಿನೈದು ಪ್ರಾಣಿಗಳನ್ನು ಕೊಂದು ಹಾಕಿರುವುದು ಕಂಡುಬಂದಿದ್ದು ಹಾಗೂ ಚಿರತೆಯು ಗ್ರಾಮದ ಒಳಗೆ ಬರುತ್ತಿರುವುದು ಕಂಡುಬಂದಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ದಿನದಲ್ಲಿ ಈ ರೀತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿರುತ್ತಾರೆ
Back to top button
error: Content is protected !!