ಕುಶಾಲನಗರ, ಅ 11: ಬಸವನಹಳ್ಳಿಯಲ್ಲಿಯಲ್ಲಿರುವ ನಂ 305ನೇ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಹಕಾರ ಇಲಾಖೆಯಿಂದ ಮಂಜೂರಾದ 34.50 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಸೀಗೆ ಪುಡಿ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ನೂತನ ಘಟಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಆಡಳಿತ ಮಂಡಳಿಗೆ ಪ್ರಾಮಾಣಿಕತೆ, ಬದ್ದತೆ ಅಗತ್ಯ. ಯಾವುದೇ ಅಕ್ರಮ, ಅವ್ಯವಹಾರಕ್ಕೆ ಅವಕಾಶ ನೀಡಬಾರದು. ಸದರಿ ಸಂಘದಲ್ಲಿ ಕೂಡ ಹಿಂದಿನ ಸಾಲಿನಲ್ಲಿ ಹಣದ ದುರುಪಯೋಗ ಪತ್ತೆಯಾಗಿತ್ತು. ಆದರೆ ಈಗ ಅದು ವಸೂಲಾತಿಯಾಗಿದೆ. ಹಾಲಿ ಅಧ್ಯಕ್ಷ ಆರ್.ಕೆ.ಚಂದ್ರ ಅವರ ಅವಧಿಯಲ್ಲಿ ಸಂಘ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಿರಿಜನರು ಕಾಡಿನ ಉತ್ಪನ್ನಗಳ ಸಂಗ್ರಹಿಸಿ ಸಂಘಕ್ಕೆ ನೀಡಿ ಆರ್ಥಿಕವಾಗಿ ಸಬಲರಾಗಬೇಕಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳ ಗುಣಮಟ್ಟದ ಕಾಯ್ದುಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.
ಐಟಿಡಿಪಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಮಾತನಾಡಿ, ಯಾವುದೇ ಸಂಘಸಂಸ್ಥೆಗಳು ಅಭಿವೃದ್ದಿ ಹೊಂದಬೇಕಾದಲ್ಲಿ ಶುದ್ದ ಹಸ್ತದ ವ್ಯವಹಾರ ಅಗತ್ಯ. ಶಾಸಕರು ಕೂಡ ಸಹಕಾರ ಸಂಘಗಳ ಅಭಿವೃದ್ದಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭ ಶಾಸಕರು, ಪೊಲೀಸ್ ಅಧಿಕಾರಿಗಳು ಸಹಕಾರ ಸಂಘದಲ್ಲಿ ತಯಾರಾದ ಸೀಗೆಪುಡಿ ಖರೀದಿ ಮಾಡಿದರು.
ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮೋಹನ್ ಕುಮಾರ್, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ನಂದಿನಿ, ಎಪಿಸಿಎಂಎಸ್ ಅಧ್ಯಕ್ಷ ಕುಮಾರಪ್ಪ, ಲ್ಯಾಂಪ್ಸ್ ಉಪಾಧ್ಯಕ್ಷ ಮನುಕುಮಾರ್, ಸಿಇಒ ಹನಿಕುಮಾರ್, ಡಿವೈಎಸ್ಪಿ ಗಂಗಾಧರಪ್ಪ, ಠಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಗ್ರಾಪಂ ಸದಸ್ಯರು, ಲ್ಯಾಂಪ್ಸ್ ನಿರ್ದೇಶಕರು, ಸಿಬ್ಬಂದಿಗಳು ಇದ್ದರು.
Back to top button
error: Content is protected !!