ಕುಶಾಲನಗರ, ಮಾ 10: ಬಸವನಹಳ್ಳಿ ಬಳಿ ಅಪಘಾತಕ್ಕೆ ಒಳಗಾದ ವಯೋವೃದ್ದೆಯನ್ನು ಕರೆತರಲು ನಿರಾಕರಿಸಿ ಸುಳ್ಳು ಕಾರಣ ನೀಡಿದ 108 ಡ್ರೈವರ್ ವಿರುದ್ದ ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರು ಖಂಡನೆ ವ್ಯಕ್ತಪಡಿಸಿದರು.
ಈ ಸಂಬಂಧ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಕರವೇ ಪದಾಧಿಕಾರಿಗಳು ಆರೋಗ್ಯಾಧಿಕಾರಿ ಡಾ.ಮಧುಸೂದನ್ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಗಾಯಾಳುವನ್ನು ಆಸ್ಪತ್ರೆಗೆ ಕರೆತರಲು ಸೇವೆ ಒದಗಿಸದ 108 ಏಜೆನ್ಸಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
108 ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಈ ಸಂಬಂಧ ಲಿಖಿತ ದೂರು ನೀಡಿದಲ್ಲಿ ಸಂಬಂಧಿಸಿದವರಿಗೆ ರವಾನಿಸಲು ಕ್ರಮವಹಿಸಲಾಗುವುದು ಎಂದು ಡಾ.ಮಧುಸೂದನ್ ಅವರು ಪ್ರಕ್ರಿಯಿಸಿದರು.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಸೇವೆಗಳು ಅಬಾಧಿತವಾಗಿ ದೊರೆಯಬೇಕಿದೆ. ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಕಂಡುಬಂದಿದ್ದು, ಹೆಚ್ಚುವರಿ ಆಂಬುಲೆನ್ಸ್ ಗಳು ಅಗತ್ಯವಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕಿದೆ ಎಂದು ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಕುದುಪಜೆ, ತಾಲೂಕು ಅಧ್ಯಕ್ಷೆ ರೂಪಹಾನಗಲ್, ಸಂಚಾಲಕ ಗೋವಿಂದರಾಜ ದಾಸ್ ಆಗ್ರಹಿಸಿದರು.
ಕರವೇ
ನಗರಾಧ್ಯಕ್ಷ ಡಿ.ಆರ್. ಯೋಗೇಶ್ ನೇತೃತ್ವದಲ್ಲಿ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಉಪಾಧ್ಯಕ್ಷ ರವಿ ಡಿ.ಎನ್, ಮಹಿಳಾ ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಆನಂದ್ ಕನ್ನಡಿಗ, ಪ್ರಧಾನ ಕಾರ್ಯದರ್ಶಿ ಮುರಳಿ, ತಾಲೂಕು ಉಪಾಧ್ಯಕ್ಷ ಫಯಾಜ್, ಪ್ರಧಾನ ಕಾರ್ಯದರ್ಶಿ ಶೈಲಾ ದೇವಾಂಗ, ಹೋಬಳಿ ಅಧ್ಯಕ್ಷ ರಾಜೇಶ್ ಕೂಡಿಗೆ, ಮಹಿಳಾ ನಗರಾಧ್ಯಕ್ಷೆ ಅನಿತಾ ದೇವಾಂಗ, ತಾಲೂಕು ಕಾರ್ಯದರ್ಶಿ ರಾಕೇಶ್ ಪಿ.ಬಿ, ತಾಲೂಕು ಅಧ್ಯಕ್ಷ ರೊನಾಲ್ಡ್, ಸದಸ್ಯರುಗಳಾದ ಲಕ್ಷ್ಮಿ ಯಶೋಧ ಮತ್ತಿತರರು ಇದ್ದರು.
Back to top button
error: Content is protected !!