ಪ್ರಕಟಣೆ

ಕುಶಾಲನಗರ: ಹಾಟ್ ಏರ್ ಬಲೂನ್, ಟ್ರೈ ಮಾಡಿ ಫನ್ ರೈಡ್: ಗಾಳಿಯಲ್ಲಿ ತೇಲುವ ಅನುಭವ

ಕುಶಾಲನಗರ, ಅ 08:ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಹಾಟ್ ಏರ್ ಬಲೂನ್ ಫನ್ ರೈಡ್ ಕುಶಾಲನಗರದಲ್ಲಿ ಪ್ರಾರಂಭಗೊಂಡಿದೆ. ಸಾಹಸಿ ಪ್ರಿಯರಿಗೆ ಹೊಸ ಅನುಭವ ನೀಡಲಿದ್ದು ಸರಿಸುಮಾರು 200 ಮೀಟರ್ ಎತ್ತರಕ್ಕೆ ಹಾರುವ ಈ ಬಲೂನ್ ಒಳಗೆ ನಿಂತು ಏರಿಯಲ್ ವೀವ್ ನಲ್ಲಿ ನೋಡಿದಲ್ಲಿ ಕುಶಾಲನಗರ ಸುತ್ತಮುತ್ತಲ 15 ಕಿಮೀ ಸುತ್ತಳತೆ ಪ್ರದೇಶ ವೀಕ್ಷಿಸಲು ಸಾಧ್ಯ. ಕುಶಾಲನಗರದ ತಾವರೆಕೆರೆ ಬಳಿಯ SLN SQUARE ನಲ್ಲಿ ಈ ಫನ್ ರೈಡ್ ನಡೆಯುತ್ತಿದ್ದು ಒಬ್ಬರಿಗೆ 1499/- ರೂ ನಿಗದಿಪಡಿಸಲಾಗಿದೆ.

ಮೂಲತಃ ಕೊಡಗಿನ ಮಡಿಕೇರಿಯ ಪೊನ್ನಚೆಟ್ಟಿರ ಅಯ್ಯಪ್ಪ ಇದರ ರೂವಾರಿ. ಏವಿಯೇಷನ್ ಪೈಲಟ್ ಆಗಿರುವ ಅಯ್ಯಪ್ಪ ಅವರ X- THRUST ಸಂಸ್ಥೆಯ ನುರಿತ ಪೈಲಟ್ ಈ ಬಲೂನ್ ರೈಡರ್ ಪೈಲಟ್. ಸಂಪೂರ್ಣ ಅಂತರಾಷ್ಟ್ರೀಯ ಗುಣ ಮಟ್ಟದ ಸಿಂಥೆಟಿಕ್ ನೈಲಾನ್ ಬಲೂನ್ ಸುರಕ್ಷಿತ ರೈಡ್ ಗೆ ಸುರಕ್ಷಿತ. ಟರ್ಕಿಯಲ್ಲಿ ಅತ್ಯಂತ ಹೆಸರುವಾಸಿಯಾದ ಈ ಫನ್ ರೈಡ್ ಕೊಡಗಿನ ಮಂದಿಗೆ ಕೂಡ‌ ಮುದ ನೀಡಲು ಸಜ್ಜಾಗಿದೆ. ಬೆಳಗ್ಗೆ ಮತ್ತು ಸಂಜೆ 5 ರಿಂದ 8 ಗಂಟೆಗೆ ರೈಡ್ ನಡೆಯಲಿದೆ. ಅಕ್ಟೋಬರ್ 20 ರವರೆಗೆ ರೈಡ್ ನಡೆಯಲಿದೆ. ಕುಶಾಲನಗರ ನಿವಾಸಿಗಳು ಇಂದೇ ರೈಡ್ ಗೆ ಸಜ್ಜಾಗಿ.
ಸಂಪರ್ಕಿಸಿ: ಅಯ್ಯಪ್ಪ: 9740207471

Related Articles

Leave a Reply

Your email address will not be published. Required fields are marked *

Back to top button
error: Content is protected !!