ಕುಶಾಲನಗರ,ಅ 06:: ಈದ್ ಮಿಲಾದ್ ಪ್ರಯುಕ್ತ ಕುಶಾಲನಗರದ ದಾರುಲ್ ಉಲೂಂ ಮದ್ರಸದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು.
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ದಾರುಲ್ ಉಲೂಂ ಮದ್ರಸದಲ್ಲಿ ಈದ್ ಮಿಲಾದ್ ಆಚರಣೆ ನಡೆಸಲಾಗುತ್ತಿದ್ದು, ಮಕ್ಕಳು ಹಾಡು, ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಾಲ್ಗೊಂಡರು.
ದಾರುಲ್ ಉಲೂಂ ಮದ್ರಸದಲ್ಲಿ ಹಿಕ್ ಮಾ, ಸಲಾಮಾ ಮತ್ತು ರಹ್ ಮಾ ಎಂಬ ಮೂರು ತಂಡಗಳನ್ನು ಮಾಡಲಾಗಿದ್ದು, ಮೂರು ತಂಡದಲ್ಲಿ ವಿದ್ಯಾರ್ಥಿಗಳು ನಾನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಗುರುವಾರ ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಶುಕ್ರವಾರ, ಶನಿವಾರದವರೆಗೆ ಮಕ್ಕಳ ಕಾರ್ಯಕ್ರಮ ನಡೆಯಲಿವೆ. ಸಂಜೆ ಮಕ್ಕಳ ದಫ್ ಪ್ರದರ್ಶನ ನಡೆಯಿತು.
ತೀರ್ಪುಗಾರರಾಗಿ ಹಾಫಿಲಾ ಕಾಲೇಜಿನ ಪ್ರಾಂಶುಪಾಲರಾದ ತಮ್ಲೀಕ್ ದಾರಿಮಿಯವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಆಕರ್ಷಕ ಉಡುಗೆಗಳನ್ನು ತೊಟ್ಟು ಗಮನ ಸೆಳೆದರು.
ಈ ಸಂದರ್ಭ ಕುಶಾಲನಗರದ ಧರ್ಮಗುರುಗಳಾದ ಸೂಫಿ ದಾರಿಮಿ, ಕಮಿಟಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಗೂ ಕಮಿಟಿ ಬಾರವಾಹಿಗಳು, ದಾರುಲ್ ಉಲೂಂ ಮದ್ರಸದ ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
Back to top button
error: Content is protected !!