ಕುಶಾಲನಗರ, ಸೆ 29: ಭಾರತೀಯ ಜನತಾ ಪಾರ್ಟಿ ಕುಶಾಲನಗರ ಮಹಾ ಶಕ್ತಿ ಕೇಂದ್ರದ ವತಿಯಿಂದ ಕುಶಾಲನಗರ ಮಹಾಲಕ್ಷ್ಮಿ ರೆಸಿಡೆನ್ಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸಮಾಜದಲ್ಲಿ ಸೇವಾ ಮನೋಭಾವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸನಿರ್ವಹಿಸುತ್ತಿರುವ ಆಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರ ಸೇವೆಯನ್ನು ಸಭೆಯಲ್ಲಿ ನೆನೆದು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಪಟ್ಟಣ ಪಂಚಾಯತಿಯ ಅದ್ಯಕ್ಷರಾದ ಜೈವರ್ಧನ್,ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಉಮಶಂಕರ್ ಹಿರಿಯ ಬಿಜೆಪಿ ಮುಖಂಡರಾದ ಕಮಲಮ್ಮ,ಪಟ್ಟಣ ಪಂಚಾಯತಿ ಸದಸ್ಯರಾದ ಶೈಲಾ ಕೃಷ್ಣಪ್ಪ,ನಾರಾಯಣ,ಮಂಡಲದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ,ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ವೇದಾವತಿ, ಮಹಿಳಾ ಮೋರ್ಚದ ಶಕ್ತಿ ಕೇಂದ್ರದ ಪ್ರಮುಖರುಗಳಾದ ಶೋಭಾ,ಬನಶಂಕರಿ,ನಿರ್ಮಲಾ ಹೊನ್ನಪ್ಪ,ಮಿಥುನ,ಇಂದಿರಾ,ವಸಂತಿ,ಶಾಂತ,ರಾಧ ಹಾಗೂ ಹಲವರು ಉಪಸ್ಥಿತರಿದ್ದರು
Back to top button
error: Content is protected !!