ಸನ್ಮಾನ

ಮುಖ್ಯಮಂತ್ರಿಗಳ ಕಾರ್ಯದರ್ಶಿಗೆ ಕುಶಾಲನಗರದಲ್ಲಿ ಸನ್ಮಾನ

ಕುಶಾಲನಗರ, ಆ 22: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಳಾಗಿ‌ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಕುಶಾಲನಗರಕ್ಕೆ ಆಗಮಿಸಿದ ರಥಬೀದಿ ನಿವಾಸಿ ಎಸ್.ಎಸ್. ನಕುಲ್ ಅವರನ್ನು ಆರ್ಯ ವೈಶ್ಯ ಮಂಡಳಿ ವತಿಯಿಂದ ಗೌರವಿಸಲಾಯಿತು.

ಶ್ರೀಮತ್ ವಾಸವಿ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ನಕುಲ್ ರವರ ಧರ್ಮಪತ್ನಿ ಪೂಜಿತ ಹಾಗೂ ಪೋಷಕರು, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷರುಗಳಾದ ಸತ್ಯನಾರಾಯಣ, ಬಿ.ಎಲ್. ಉದಯ್ ಕುಮಾರ್, ಖಜಾಂಚಿ ಪ್ರಶಾಂತ್, ನಿರ್ದೇಶಕರುಗಳಾದ ಅಶೋಕ್, ಕೆ.ಜಿ ಸತೀಶ್, ವೈಶಾಖ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!