ಕಾರ್ಯಕ್ರಮ

ನೂರೇ ಮದೀನ ಎಜುಕೇಶನ್ ಟ್ರಸ್ಟ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕುಶಾಲನಗರ, ಆ 16: ಕುಶಾಲನಗರ ಪಟ್ಟಣದ ನೂರೇ ಮದೀನ ಎಜುಕೇಶನ್ ಟ್ರಸ್ಟ್ ನಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಗಿಡ ನೆಡುವ ಮೂಲಕ ಆಚರಿಸಲಾಗಿತ್ತು ನಂತರ ನೂರೇಮಧೀನ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಮದನಿ ಉಸ್ತಾದ್ ರವರು ಧ್ವಜಾರೋಹಣವನ್ನು ನೆರವೇರಿಸಿ ನಂತರ ನೂರೆ ಮದೀನ ಟ್ರಸ್ಟ್ ನ ಕೆಲವು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಅಂಕವನ್ನು ಪಡೆದ ವಿದ್ಯಾರ್ಥಿ ಗಳನ್ನು ಸನ್ಮಾನಿಸ ಲಾಗಿರುತ್ತದೆ ನಂತರ ಝಬೀರ್ ನಿಜಾಮ್ ಉಸ್ತಾದ್ ರವರು ವಿದ್ಯಾರ್ಥಿಗಳಿಗೆ ಹಿತವಚನ ಹಾಗೂ 80ನೇ ವರ್ಷದ ಸ್ವಾತಂತ್ರೋತ್ಸವದ ಮಹತ್ವವನ್ನು, ಶಾಂತಿ ಸಾಮರಸ್ಯದ ಬಾಳ್ವಿಕೆಯನ್ನು,ವಿವಿಧತೆಯಲ್ಲಿ ಏಕತೆಯ ಮಹತ್ವವನ್ನು ತಿಳಿಸಿ ಕೊಟ್ಟಿರುತ್ತಾರೆ

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ನೊರೆ ಮದೀನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಮದನಿ ಉಸ್ತಾದ್, ಹಾಗೂ ಇವರೊಂದಿಗೆ ಜಬೀರ್ ನಿಜಾಮ್ ಉಸ್ತಾದ್, ಸಂಸುದ್ದೀನ್, ಅಬ್ದುಲ್ ಅಜೀಜ್ ,ಹಸೈನಾರ್ ಇಬ್ರಾಹಿಂ ಹನೀಫ್, ಸಂಶು ಮುಂತಾದ ಟ್ರಸ್ಟಿನ ಸದಸ್ಯರುಗಳು, ಸ್ಥಳೀಯರು, ಟ್ರಸ್ಟ್ ನ 24 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!