ಕ್ರೈಂ

ವಿವಿಧೆಡೆ ಕಳ್ಳತನ: ಕೇರಳ ರಾಜ್ಯದ ಆರೋಪಿ ಬಂಧನ

ಕುಶಾಲನಗರ, ಆ 24: ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ಕಾಲೇಜು ಸಮೀಪದಲ್ಲಿರುವ ಕೂರ್ಗ್ ಎಕ್ಸ್‌ಪ್ರೆಸ್ ಕಾಫಿ ಶಾಪ್‌ನಲ್ಲಿ ದಿನಾಂಕ: 05-08-2026 ರಂದು ರಾತ್ರಿ ಸಮಯದಲ್ಲಿ ಅಂದಾಜು ರೂ.4000/- ನಗದು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ: 109/2026, ಕಲಂ: 305(ಎ), 331(3), 331(4) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಹಿರಿಯ ಅಧಿಕಾರಿಗಳು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಮಾಹಿತಿ ಸಂಗ್ರಹಿಸಿ ದಿ: 23-08-2026 ರಂದು ಆರೋಪಿ ಸಲೀಂ.ಟಿ.ಎ, 44 ವರ್ಷ, ಹುಳಿಕಲ್ ಗ್ರಾಮ, ಇರಿಟ್ಟಿ ತಾ||, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ ಎಂಬಾತನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿ ಸಲೀಂ.ಟಿ.ಎ ಈತನು ಈ ಕೆಳಕಂಡ 03 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 04 ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

1. ಸುಂಠಿಕೊಪ್ಪ ಪೊಲೀಸ್ ಠಾಣೆ ಮೊ.ಸಂ: 93/2026 ರಲ್ಲಿ ಅಂದಾಜು ನಗದು ರೂ. 37,000/- ಕಳವು.

2. ವಿರಾಜಪೇಟೆ ನಗರ ಪೊಲೀಸ್ ಠಾಣೆ ಮೊ.ಸಂ: 92/2026 ರಲ್ಲಿ ಅಂದಾಜು ನಗದು ರೂ.8,000/- ಕಳವು

3. ಕೇರಳ ರಾಜ್ಯದ ಇರಿಟ್ಟಿ ಪೊಲೀಸ್ ಠಾಣೆಯಲ್ಲಿ 02 ಪತ್ಯೇಕ ಕಳವು ಪ್ರಕರಣಗಳು ದಾಖಲಾಗಿದ್ದು, ನಗದು ರೂ. 51,650/-.

Related Articles

Leave a Reply

Your email address will not be published. Required fields are marked *

Back to top button
error: Content is protected !!