ಕೂಡಿಗೆ, ಆ. 21: ಶ್ರಾವಣ ಮಾಸದಲ್ಲಿ ಬರುವ ವರ ಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಗ್ರಾಮಾಂತರ, ಮತ್ತು ನಗರ ಪ್ರದೇಶಗಳಲ್ಲಿ ಸಡಗರ ಸಂಭ್ರಮ ಮತ್ತು ಶ್ರಧ್ಧಾಭಕ್ತಿಯಿಂದ ನೆರವೇರಿಸಿದ್ದು ಕಂಡುಬಂದಿದೆ.
ತಾಲ್ಲೂಕು ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ ತೊರೆನೂರು ಶಿರಂಗಾಲ ಕುಶಾಲನಗರ ವ್ಯಾಪ್ತಿಯಲ್ಲಿ ಮಹಿಳೆಯರು ಮುಂಜಾನೆಯಲ್ಲಿ ಸಂಸ್ಕೃತಿಯ ಹಿನ್ನೆಲೆಯಂತೆ,ಮತ್ತು ಹಿಂದಿನ ಸಂಪ್ರದಾಯದಂತೆ ಮನೆಯಲ್ಲಿ ವರ ಮಹಾಲಕ್ಷ್ಮಿಯ ವಿಗ್ರಹವನ್ನು ಇಟ್ಟು ವಿಶೇಷ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಿ ಪೂಜೆಗೆ ನಿಗದಿ ಪಡಿಸಿದ ಪ್ರಸಾರಗಳನ್ನು ತಯಾರಿಸಿ ದೇವಿಗೆ ಹೆಡೆ ಇಟ್ಟು ಪೂಜೆ ಸಲ್ಲಿಸಿ ನಂತರ ಅಕ್ಕಪಕ್ಕದ ಮನೆಯ ಮಹಿಳೆಯರನ್ನು ಕರೆದು ಅರಿಶಿನ ಕುಂಕುಮ ನೀಡುವ ಮೂಲಕ ಶುಭಾಶಯಗಳನ್ನು ಹಂಚಿಕೊಂಡು ಸಂಪ್ರದಾಯದಂತೆ ಮಹಿಳೆಯರಿಗೆ ನೀಡುವ ಮಡಲಕ್ಕಿಯನ್ನು ನೀಡಿ ಗೌರವಿಸುವ ಸಂಪ್ರದಾಯ ತಾಲ್ಲೂಕು ವ್ಯಾಪ್ತಿಯಲ್ಲಿ ಕಂಡುಬಂದಿತು.
Back to top button
error: Content is protected !!