ಸಭೆ

ಕುಶಾಲನಗರಕ್ಕೆ‌ ಕಂಬಳದ ಕೋಣಗಳು: ಪುತ್ತೂರು & ಮಡಿಕೇರಿ‌ ಶಾಸಕರ ಸಭೆ

ಕುಶಾಲನಗರ, ಅ 02: ಮೈಸೂರು ದಸರಾಗೆ ಪುತ್ತೂರಿನಿಂದ ತೆರಳುವ ಕಂಬಳ ಕೋಣಗಳು ಮಾರ್ಗಮಧ್ಯೆ ಕುಶಾಲನಗರದಲ್ಲಿ ವಿಶ್ರಾಂತಿಗಾಗಿ ನಿಲುಗಡೆಗೊಳಿಸುವ ಸಂಬಂಧ

ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ರೈ ಮತ್ತು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರಿಂದ ಸ್ಥಳ‌ ಪರಿಶೀಲನೆ ನಡೆಯಿತು.

ಅ.16 ರಂದು 150 ಕಂಬಳದ ಕೋಣಗಳ ಆಗಮನ, ಜೊತೆಯಲ್ಲಿ 2000ಕ್ಕೂ ಅಧಿಕ ಮಂದಿ ಪುತ್ತೂರಿನಿಂದ ಮೈಸೂರಿಗೆ ತೆರಳುವ ಸಂದರ್ಭ ಮಾರ್ಗಮಧ್ಯೆ ವಿಶ್ರಾಂತಿ, ಊಟೋಪಚಾರಕ್ಕೆ ಕುಶಾಲನಗರದಲ್ಲಿ ನಿಲುಗಡೆಗೊಳಿಸಲಿದ್ದಿ ಸೂಕ್ತ ಸ್ಥಳದ ಅಗತ್ಯತೆ ಕಾರಣ ಜಾತ್ರಾ ಮೈದಾನ ಪರಿಶೀಲನೆ ನಡೆಸಲಾಯಿತು.

ಅಂದಾಜು 200 ಕಿಮೀ
ಟ್ರಕ್ ಗಳಲ್ಲಿ ಕ್ರಮಿಸುವ ಕೋಣಗಳು‌ ಮತ್ತು ಅದರ ಜೊತೆಯಲ್ಲಿ ಬರುವವರ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ
ಪೂರ್ವಭಾವಿಯಾಗಿ‌ ಸ್ಥಳ ಪರಿಶೀಲಿಸಲಾಯಿತು. ಉಪಚಾರ ನೀಡುವ ಸಂಬಂಧ ಪುರಸಭೆಯಲ್ಲಿ ಶಾಸಕದ್ವಯರ ಸಮ್ಮುಖದಲ್ಲಿ ಪ್ರಮುಖರ ಚರ್ಚೆ ನಡೆಯಿತು.

ಈ ಸಂದರ್ಭ
ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ,
ಕಾರ್ಯದರ್ಶಿ ರವೀಂದ್ರ ರೈ, ವಿಶ್ವ ತುಳು‌ ಒಕ್ಕೂಟದ ಜಿಲ್ಲಾಧ್ಯಕ್ಷ ಐತಪ್ಪರೈ, ಪ್ರಧಾನ ಕಾರ್ಯದರ್ಶಿ ರಾಜೀವ ಲೋಚನ,
ಜಿಲ್ಲಾ ಸಂಚಾ ಎಂ.ಆರ್.ರವಿ, ಪ್ರಮುಖರಾದ ಸದಾಶಿವ ರೈ, ಅಪ್ಪು ರವೀಂದ್ರ, ತುಳುವೆರ ಕೂಟದ ಪ್ರಕಾಶ್ ಆಚಾರ್ಯ, ವಿರಾಜಪೇಟೆ ತಾಲೂಕು ಅಧ್ಯಕ್ಷ ಶಬರೀಶ್ ಶೆಟ್ಟಿ‌, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!