ಸಿದ್ದಾಪುರ : ಮನೆಗಳ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸಿದ ತಂಡವೊಂದು ಮಲ ತ್ಯಾಜ್ಯಗಳನ್ನು ವಾಹನದಲ್ಲಿ ತುಂಬಿಸಿ ನದಿ ದಡದಲ್ಲಿ ವಿಲೇವಾರಿ ಮಾಡಿರುವ ಕೃತ್ಯ ನೆಲ್ಯಹುದಿಕೇರಿ ಕಾವೇರಿ ಸೇತುವೆ ಬಳಿನಡೆದಿದೆ.
ಏನಿದು ಘಟನೆ : ಶುಕ್ರವಾರ ಬೆಳಗ್ಗೆ ನೆಲ್ಯಹುದಿಕೇರಿಯ ಕಾವೇರಿ ಸೇತುವೆ ಬಳಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸುವ ವಾಹನವೊಂದು ಸಂಶಯಾಸ್ಪದವಾಗಿ ನಿಂತಿರುವುದನ್ನು ಗಮನಿಸಿದ ವಾಯುವಿಹಾರಿಗಳು ವಾಹನದ ಚಿತ್ರವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಸ್ಥಳದಲ್ಲಿ ದುರ್ವಾಸನೆಯಿಂದ ವಾಹನದ ಸಮೀಪಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಿಂತಿರುಗಿದ್ದಾರೆ. ನಂತರ ಈ ವಿಷಯವನ್ನು ಸ್ಥಳೀಯ ಡೊಮಿನಾಸ್ ಯುವಕಸಂಘದ ಗಮನಕ್ಕೆ ತಂದು ಪರಿಶೀಲಿಸಿದ ಸಂಧರ್ಭದಲ್ಲಿ ನದಿ ದಡದಲ್ಲಿ ಮನೆಗಳಿಂದ ಸ್ವಚ್ಛಗೊಳಿಸಿದ ಮಲ ತ್ಯಾಜ್ಯಗಳನ್ನು ವಿಲೇವಾರಿ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಡೊಮಿನಾಸ್ ಯುವಕ ಸಂಘದವರು ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸುವ ವಾಹನದ ಹಾಗೂ ಕಾರ್ಮಿಕರ ವಿರುದ್ದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
Back to top button
error: Content is protected !!