ಕುಶಾಲನಗರ, ಸೆ 11: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ವತಿಯಿಂದ ಇಲ್ಲಿನ ರೈತ ಸಹಕಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಇನ್ನರ್ ವೀಲ್ ಕ್ಲಬ್ ನ 53ನೇ ಜಿಲ್ಲಾ ಸಮ್ಮೇಳನ ಖುಷಿ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಸಮ್ಮೇಳನ ಉದ್ಘಾಟಿಸಿದ ಜಿಲ್ಲಾ ಚೇರ್ಮನ್ ಕವಿತಾ ನಿಯತ್ ಮಾತನಾಡಿ,ಮಹಿಳೆಯರ ಸಬಲೀಕರಣಕ್ಕಾಗಿ,ಸ್ನೇಹವನ್ನು ಉತ್ತೇಜಿಸುವುದು,ವೈಯಕ್ತಿಕ ಸೇವೆಯ ಆದರ್ಶಗಳನ್ನು ಪ್ರೋತ್ಸಾಹಿಸುವುದು ಹಾಗೂ ಅಂತರಾಷ್ಟ್ರೀಯ ತಿಳುವಳಿಕೆಯನ್ನು ಬೆಳೆಸುವುದು ಇನ್ನರ್ ವೀಲ್ ನ ಉದ್ದೇಶವಾಗಿದೆ ಎಂದು ಹೇಳಿದರು.
ಮಹಿಳೆಯರು ಹೆಚ್ಚು ಹೆಚ್ಚು ಇಂತಹ ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮನ್ನು ಸಾಮಾಜಿಕ ಸೇವಾಕಾರ್ಯ ಹಾಗೂ ಸಮಾಜಮುಖಿ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದರು. ಇನ್ನರ್ ವೀಲ್ ಸಮ್ಮೇಳನಗಳು ಮಹಿಳೆಯಲ್ಲಿ ಆತ್ಮವಿಶ್ವಾಸ,ಪರಸ್ಪರ ಪ್ರೀತಿ ಹಾಗೂ ಸಹಬಾಳ್ವೆಯನ್ನು ಬೆಸೆಯಲು ಉತ್ತಮ ವೇದಿಕೆಯಾಗಿದೆ ಎಂದರು.
ಕುಶಾಲನಗರ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ರೈ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಜಿಲ್ಲಾ ಉಪಾಧ್ಯಕ್ಷೆ ಪೂರ್ಣಿಮಾ ರವಿ, ಜಿಲ್ಲಾ ಕಾರ್ಯದರ್ಶಿ ವೈಶಾಲಿ ವಿಕಾಸ್ ಕುಡ್ವಾ,ಶಬರಿ ಕಡಿದಾಳ್,ಜಿಲ್ಲಾ ಇಎಸ್ಒ ಸುಮಾಕೃಷ್ಣ,ಜಿಲ್ಲಾ ಐಎಸ್ಒ ಉಮಾಮಹೇಶ್, ಜಿಲ್ಲಾಎಡಿಟರ್ ರಂಜಾನಿ ಭಟ್,ಸಮಾವೇಶದ ಸಂಚಾಲಕಿ ಸುನೀತಾ ಮಹೇಶ್, ನಿರ್ದೇಶಕಿ ಪುಷ್ಪಾ ಗುರುರಾಜ್, ಉಪಾಧ್ಯಕ್ಷೆ ನೇಹಾಜಗದೀಶ್,ಕಾರ್ಯದರ್ಶಿ ಅಶ್ವಿನಿ ಆರ್.ಕುಮಾರ್,ಖಜಾಂಚಿ ದೀಪಾಪೂಜಾರಿ,ಐಎಸ್ಒ ದಿವ್ಯಾಸುಜಾಯ್,ಮುಖಂಡರಾದ ಚಿತ್ರಾರಮೇಶ್,ತೇಜಸ್ವಿನಿ ಗೌತಮ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಇನ್ನರ್ ವ್ಹೀಲ್ 318 ರ ಜಿಲ್ಲೆಯ ವಿವಿಧೆಡೆಗಳ ಒಟ್ಟು 47 ಸಂಸ್ಥೆಗಳಿಂದ 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಸಮ್ಮೇಳನದಲ್ಲಿ ಪ್ರಸರ್ಶಿಸಿದ ವಿವಿಧ ಸಾಂಸ್ಕ್ರತಿಕ ಹಾಗೂ ಮನರಂಜನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಬೆಳಿಗ್ಗೆ ಹಾಗೂ ಮಧ್ಯಾಹ್ನ ಅದ್ದೂರಿ ಊಟೋಪಹಾರ ವ್ಯವಸ್ಥೆ ಮಾಡಿದ್ದರು.ಅಲ್ಲದೇ ಮಹಿಳೆಯರು ಸ್ವತಃ ತಾವೇ ಸಿದ್ದಪಡಿಸಿ ತಂದಿದ್ದ ಗೃಹೋಪಯೋಗಿ ಖಾದ್ಯಗಳು ಹಾಗೂ ಪರಿಕರಗಳ ಮಳಿಗೆಗಳಲ್ಲಿ ಮಹಿಳೆಯರ ವ್ಯಾಪಾರ ಜೋರಾಗಿ ನಡೆಯಿತು.
Back to top button
error: Content is protected !!