ವಲಯ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಜೆಸಿಐ ಕುಶಾಲನಗರ ಕಾವೇರಿಯಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳು

ಕುಶಾಲನಗರ: ವಲಯ 14ರ ಅಧ್ಯಕ್ಷರಾದ ಜೆಸಿ ಪ್ರಜ್ವಲ್ ಜೈನ್ ಅವರ ಸ್ಥಳೀಯ ಸಂಸ್ಥೆ (ಎಲ್ಒ) ಭೇಟಿಯ ಅಂಗವಾಗಿ ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಮೂರು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಮೊದಲಿಗೆ ಡೋಲ್ಮಾ ಶ್ವಾನ ರಕ್ಷಣಾ ಶಿಬಿರಕ್ಕೆ ಭೇಟಿ ನೀಡಿ, ಅಲ್ಲಿನ ಶ್ವಾನಗಳ ಆಹಾರಕ್ಕಾಗಿ ಅಗತ್ಯವಿದ್ದ ಅಕ್ಕಿ, ಮೊಸರು ಹಾಗೂ ಇತರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ನಂತರ ಕೂಡಿಗೆಯ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ವೃದ್ಧಾಶ್ರಮಕ್ಕೆ ಅಗತ್ಯವಿದ್ದ ನೀರು ವಿತರಕ ಯಂತ್ರವನ್ನು (ವಾಟರ್ ಡಿಸ್ಪೆನ್ಸರ್) ಹಸ್ತಾಂತರಿಸುವುದರ ಜೊತೆಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.
ಅನಂತರ ಮಾದಾಪಟ್ಟಣದ ಗೋಶಾಲೆಗೆ ಭೇಟಿ ನೀಡಿ, ಗೋವುಗಳ ಆರೈಕೆಗಾಗಿ ಅಗತ್ಯವಿದ್ದ ಪಶು ಆಹಾರ, ಬೆಲ್ಲ ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಮೂರು ಸೇವಾ ಕಾರ್ಯಕ್ರಮಗಳ ಮೂಲಕ ಜೆಸಿಐ ಕುಶಾಲನಗರ ಕಾವೇರಿ ಸಂಸ್ಥೆಯು ಸಮಾಜದ ವಿವಿಧ ವರ್ಗಗಳ ಅಗತ್ಯಗಳಿಗೆ ಸ್ಪಂದಿಸುವ ತನ್ನ ಸಾಮಾಜಿಕ ಬದ್ಧತೆ ಮತ್ತು ಸೇವಾ ಮನೋಭಾವವನ್ನು ಮತ್ತೊಮ್ಮೆ ಪ್ರದರ್ಶಿಸಿತು.
ಈ ಸಂದರ್ಭದಲ್ಲಿ ಜೆಸಿಐ ಕುಶಾಲನಗರ ಕಾವೇರಿಯ ಅಧ್ಯಕ್ಷರಾದ ಜೆಸಿ ಶ್ರೀನಿವಾಸ್, ಜೆಸಿ ರಜನಿಕಾಂತ್ ಎಂ.ಜೆ., ಜೆಸಿ ತೇಜಾಧಿನೇಶ್, ಜೆಸಿ ಜಗದೀಶ್, ಜೆಸಿ ರವಿ, ಜೆಸಿ ಪ್ರಶಾಂತ್, ಜೆಸಿ ನಿಶಾಂತ್, ಜೆಸಿ ಕಾವ್ಯಾ, ಜೆಸಿ ಯಶವಂತ್ ಸೇರಿದಂತೆ ಜೆಸಿಐನ ಇತರ ಸದಸ್ಯರು ಉಪಸ್ಥಿತರಿದ್ದರು.



