ಕುಶಾಲನಗರ, ನ 10: ಕುಶಾಲನಗರ ತಾಲೂಕು ಸಾಮರಸ್ಯ ವೇದಿಕೆ ವತಿಯಿಂದ 7ನೇ ಹೊಸಕೋಟೆಯ ಗೌರಿ ಬಡಾವಣೆಯ ದಲಿತ ಬಂಧುಗಳ ಕಾಲೋನಿಯಲ್ಲಿ ದೀಪಾವಳಿ ಕಾರ್ಯಕ್ರಮ ಆಚರಿಸಲಾಯಿತು .
ಮಹಾಗಣಪತಿ ದೇವಸ್ಥಾನದಲ್ಲಿ ಗರ್ಭಗುಡಿಯಿಂದ ಅರ್ಚಕರು ದೀಪವನ್ನು ಹಚ್ಚಿ ವಿಶ್ವನಾಥ್ ಮತ್ತು ಪುಷ್ಪ ದಂಪತಿಗಳ ಕೈಗೆ ನೀಡಿದರು. ಗೋ ಪೂಜೆಯೊಂದಿಗೆ ಸಾಮರಸ್ಯ ಜ್ಯೋತಿ ಬಡಾವಣೆಯ ಪ್ರತಿ ಮನೆಯನ್ನು ಬೆಳಗಿತು. ಚೀ. ನಾ. ಸೋಮೇಶ್ ಮಾತನಾಡಿ ‘ ಸಮಾಜದಲ್ಲಿರುವ ಅಸ್ಪೃಶ್ಯತೆ, ಜಾತಿ ತಾರತಮ್ಯ ತೊಲಗಿ ಸಾಮರಸ್ಯ ಬದುಕು ನಮ್ಮದಾಗಲಿ. ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರಲಿ ‘ ಎಂದು ಆಶೀರ್ವಚನ ನೀಡಿದರು . ನಂತರ ಎಲ್ಲರೂ ಒಟ್ಟಿಗೆ ಸಹ ಭೋಜನ ಮಾಡಿದರು.
ಸಾಮಾಜಿಕ ಕಾರ್ಯಕರ್ತರಾದ ಶಿವನ್ ಅವರು ಸ್ವಾಗತ ಪರಿಚಯ, ದಿನೇಶ್ ವಂದನಾರ್ಪಣೆ ಮಾಡಿದರು.
ಸಾಮರಸ್ಯ ಗತಿ ವಿಧಿಯ ಕಾರ್ಯಕರ್ತರು, ಊರಿನ ಪ್ರಮುಖರು. ದಲಿತ ಬಂಧುಗಳು, ಮಾತೆಯರು ಉಪಸ್ಥಿತರಿದ್ದರು.
Back to top button
error: Content is protected !!