ಕುಶಾಲನಗರ, ನ 14: ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್ ಸಂದರ್ಭ ದಂಪತಿಗಳ ದುರ್ಮರಣ ಹಿನ್ನಲೆಯಲ್ಲಿ ಮೃತ ಧರ್ಮೇಶ್ ನಾಯಕ್ ಅವರ ಪುತ್ರಿ ದೇವಾಂಶಿ ನಾಯಕ್ ಅವರ ದೂರಿನ ಅನ್ವಯ ಬೋಟ್ ಚಾಲಕ ಪ್ರದೀಪ್, ಅಡ್ವೆಂಚರ್ ವಾಟರ್ ಸ್ಪೋರ್ಟ್ ಮಾಲೀಕ, ವಾಟರ್ ಸ್ಪೋರ್ಟ್ ನಿರ್ವಹಣಾ ಮಂಡಳಿ, ಅರಣ್ಯ ಇಲಾಖೆ ಮತ್ತು ನೀರಾವರಿ ನಿಗಮದ ವಿರುದ್ಸ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ಅಜಾಗರೂಕ ಚಾಲನೆಯಿಂದ ಘಟನೆ ಸಂಭವಿಸಿದೆ. ಅಲ್ಲದೆ ಸೂಕ್ತ ಸುರಕ್ಷಾ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Back to top button
error: Content is protected !!