ಕುಶಾಲನಗರ, ನ 11: ಬಿಜೆಪಿ ಯುವ ಮುಖಂಡ, ಸಮಾಜ ಸೇವಕ, ರೈತ ಸಂಘ (ವಾಸುದೇವ ಮೇಟಿ ಬಣ) ಕೊಡಗು ಜಿಲ್ಲಾಧ್ಯಕ್ಷರೂ ಆದ ಉದ್ಯಮಿ ಹೆಚ್.ಜೆ.ಶರತ್ ಅವರು ತಮ್ಮ 33ನೇ ಹುಟ್ಟುಹಬ್ಬವನ್ನು ಕೂಡಿಗೆ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಕಳೆದ 5 ವರ್ಷಗಳಿಂದ ಸತತವಾಗಿ ವೃದ್ದಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸುವ ಪರಿಪಾಠ ಬೆಳೆಕೊಂಡಿರುವ ಬಗ್ಗೆ ತಿಳಿಸಿದ ಅವರು, ತಮ್ಮ ಮಕ್ಕಳಿಗೆ, ಕುಟುಂಬಸ್ಥರಿಗೆ ಬೇಡವಾದ ಆಶ್ರಮದ ವೃದ್ದ ಜೀವಿಗಳ ಬಗ್ಗೆ ಸಮಾಜ ಕಾಳಜಿ ತೋರಬೇಕಿದೆ ಎಂದು ಆಶಿಸಿದರು.
ಪತ್ನಿ ಸಿಂಧೂರ ಹಾಗೂ ಪುತ್ರಿ ಜ್ಞಾನ ಶರತ್ ಅವರೊಂದಿಗೆ ಆಶ್ರಮವಾಸಿಗಳಿಗೆ ಹಣ್ಣುಹಂಪಲು ಹಾಗೂ ದಿನಸಿಯನ್ನು ವಿತರಣೆ ಮಾಡಿ ಆಶೀರ್ವಾದ ಪಡೆದರು.
ಮುಂಬರುವ ಜಿಪಂ ಚುನಾವಣೆಯಲ್ಲಿ ಹೆಬ್ಬಾಲೆ ಕ್ಷೇತ್ರದಿಂದ ಬಿಜೆಪಿ ಪಕ್ಷದ ಪ್ರಭಲ ಟಿಕೇಟ್ ಆಕಾಂಕ್ಷಿಯಾಗಿರುವ ಶರತ್ ಅವರು, ಗೆಲುವು ಸಾಧಿಸಿದಲ್ಲಿ ಅಭಿವೃದ್ದಿಯೊಂದಿಗೆ ಸಾಮಾಜಿಕವಾಗಿ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇತರರಿಗೆ ಪ್ರೇರಣೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!