ಪ್ರಕಟಣೆ
ಅಕ್ಟೋಬರ್ ನಲ್ಲಿ ತಾಲೂಕು ಆಸ್ಪತ್ರೆಗೆ ಶಿಲ್ಯನ್ಯಾಸ, ಡಿಪೋ ಉದ್ಘಾಟನೆ

ಕುಶಾಲನಗರ, ಸೆ 29: ಅಕ್ಟೋಬರ್ ತಿಂಗಳಲ್ಲಿ ಹಾರಂಗಿ ರಸ್ತೆಯಲ್ಲಿ ತಾಲೂಕು ಆಸ್ಪತ್ರೆಗೆ ನಿರ್ಮಾಣಕ್ಕೆ ಭೂಮಿಪೂಜೆ ಸೇರಿದಂತೆ ಬಸವನಹಳ್ಳಿಯಲ್ಲಿ ಪೂರ್ಣಗೊಂಡಿರುವ ಸಾರಿಗೆ ಬಸ್ ಡಿಪೋ ಲೋಕಾರ್ಪಣೆ ಗೆ ನಿರ್ಧರಿಸಲಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಸರಕಾರಿ ಪಾಲಿಟೆಕ್ನಿಕ್ ಬಳಿ ನಿರ್ಮಾಣಗೊಳ್ಳುತ್ತಿರುವ ಪ್ರಜಾ ಸೌಧ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ಮುಂದಿನ ಫೆಬ್ರುವರಿ-ಏಪ್ರಿಲ್ ನಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ರಥಬೀದಿ ಸೇರಿದಂತೆ
ಕಾವೇರಿ ಸೇತುವೆ ಬಳಿಯಿಂದ ಗಂಧದಕೋಟೆ ವರೆಗೆ ಹೆದ್ದಾರಿ ಬದಿ ಫುಟ್ಪಾತ್ ನಿರ್ಮಾಣ ಚಿಂತನೆ ಹೊಂದಲಾಗಿದೆ ಎಂದು ಅವರು ತಿಳಿಸಿದರು.



