ಕುಶಾಲನಗರ, ಸೆ 15: ಮಳೆಯ ಅಭಾವದಿಂದ ಕೆರೆಗಳು ಬತ್ತಿಹೋಗಿದ್ದು ಒಂದೆಡೆಯಾದರೆ ಕೆರೆಯಲ್ಲಿ ಸಂರಕ್ಷಿಸುತ್ತಿರುವ ಮೀನುಗಳ ಜೀವ ಉಳಿಸಲು ಕೆರೆಗೆ ಬೋರ್ ವೆಲ್ ನೀರನ್ನು ಹರಿಸುವ ಪರಿಸ್ಥಿತಿ ಎದುರಾಗಿದೆ. ಇಂತಹ ದೃಶ್ಯ ಬೈಲುಕೊಪ್ಪದ 2ನೇ ಕ್ಯಾಂಪ್ ನಲ್ಲಿ ಕಂಡುಬಂದಿದೆ. ಟಿಬೆಟ್ ಕ್ಯಾಂಪ್ ಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ಹೆಚ್ಚು ಭೇಟಿ ನೀಡುವ ಕೈಲಾಶಪುರ ಕೆರೆಯಲ್ಲಿರುವ ಮೀನುಗಳನ್ನು ಬಿಸಿಲಿನಿಂದ ರಕ್ಷಿಸಲು ಬೋರ್ ವೆಲ್ ನೀರನ್ನು ಹರಿಬಿಟ್ಟು ಬರಡಾಗಿರುವ ಕೆರೆ ತುಂಬಿಸುವ ಕೆಲಸ ನಡೆಯುತ್ತಿದೆ. ಕೆರೆ ಸಂಪೂರ್ಣ ಬತ್ತಿಹೋಗಿದ್ದು ಸಮೀಪದ ಜಮೀನಿನ ಕೊಳವೆ ಬಾವಿಯಿಂದ ಕೆರೆ ನೀರು ಹಾಯಿಸಿ ನೂರಾರು ಮೀನುಗಳ ಜೀವ ರಕ್ಷಣೆ ಕಾರ್ಯ ನಡೆಯುತ್ತಿದೆ.
Back to top button
error: Content is protected !!