ಅಪಘಾತ

ಕೂಡುಮಂಗಳೂರಿನಲ್ಲಿ ಹಾಲಿನ ಟ್ಯಾಂಕರ್ ಹರಿದು ಬೈಕ್ ಸವಾರ ಸಾವು

ಕುಶಾಲನಗರ, ಸೆ 17: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಗುರುಳಿದ ಬೈಕ್ ಸವಾರನ ಮೇಲೆ ಹಾಲಿನ ಟ್ಯಾಂಕರ್ ಹರಿದು ಸವಾರ ಮೃತಪಟ್ಟ ಘಟನೆ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.

ಕುಶಾಲನಗರದಿಂದ ಕೂಡಿಗೆಯತ್ತ ತೆರಳುತ್ತಿದ್ದ ಯುವಕರು ಹಾಲಿನ ಟ್ಯಾಂಕರ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಬದಿಯಿಂದ ಬಂದ ಮತ್ತೊಂದು ಬೈಕ್ ಗೆ ಡಿಕ್ಕಿಯಾಗಿ ನೆಲಕ್ಕುರುಳಿದ ಸಂದರ್ಭ ಹಿಂಬದಿಯಿಂದ ಬಂದ ಹಾಲಿನ ಟ್ಯಾಂಕರ್ ಹರಿದು ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬ್ಯಾಡಗೊಟ್ಟದ ಕಾರ್ಮಿಕ ಸುಬ್ರಮಣಿ (32) ಮೃತ ಯುವಕ
ಈತನೊಂದಿಗೆ ಬೈಕ್ ನಲ್ಲಿದ್ದ
ಹಿಂಬದಿ ಸವಾರ ಕಾರ್ತಿಕ್ ಎಂಬವರ‌ ಕಾಲು ಮುರಿದಿದ್ದು ಪ್ರಥಮ ಚಿಕಿತ್ಸೆ‌ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!