ಕುಶಾಲನಗರ ಸೆ 17: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2026-27 ನೇ ಸಾಲಿನ ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಕೂಡಿಗೆ ಕ್ರೀಡಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆರಂಭಗೊಂಡಿತು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡೆಯು ಶಿಸ್ತು, ಸಂಯಮದ ಜೊತೆಯಲ್ಲಿ ಆರೋಗ್ಯವೃದ್ದಿಗೆ ಸಹಕಾರಿಯಾಗಲಿದೆ. ಕ್ರೀಡಾಪಟುಗಳು ಕ್ರೀಡಾ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಸಾಧನೆ ತೋರಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಡಾ. ಸದಾಶಿವಯ್ಯ ಎಸ್ ಪಲ್ಲೇದ್, ರಾಷ್ಟ್ರೀಯ ಹಾಕಿ ಕ್ರೀಡಾಪಟು ಪೂರ್ಣೇಶ್, ಕುಶಾಲನಗರ ಸಹಕಾರ ಸಂಘದ ನಿರ್ದೇಶಕ ಕೆ.ಎನ್. ದೇವರಾಜ್, ಕ್ರೀಡಾಶಾಲೆ ಹಾಕಿ ತರಬೇತುದಾರರಾದ ವೆಂಕಟೇಶ್, ಅಂತೋಣಿ ಡಿಸೋಜ, ಸುಬ್ಬಯ್ಯ ಸೇರಿದಂತೆ ಕ್ರೀಡಾಶಾಲಾ ವಸತಿ ಗೃಹ ಮೇಲ್ವಿಚಾರಕಿ ಸವಿತ, ತಾಲ್ಲೂಕು ವ್ಯಾಪ್ತಿಯ ವಿವಿಧ ಶಾಲೆಗಳ ಕ್ರೀಡಾ ತರಬೇತುದಾರರು, ಮತ್ತು ಕ್ರೀಡಾ ಶಾಲೆ ವಿವಿಧ ವಿಭಾಗದ ತರಬೇತಿದಾರರು ಇದ್ದರು.
ಕುಶಾಲನಗರ ತಾಲ್ಲೂಕು ಮಟ್ಟದಲ್ಲಿ ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಪುಟ್ಬಾಲ್, ಯೋಗಾಸನ, ಖೋ-ಖೋ, ವಿಭಾಗದ ಕ್ರೀಡಾಕೂಟಗಳು ನಡೆದವು.
Back to top button
error: Content is protected !!