ಸತತ 9 ವರ್ಷಗಳಿಂದ ಕೋಟಿಗೂ ಮೀರಿ ಲಾಭ ಗಳಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಕುಶಾಲನಗರ, ಸೆ 16: 100 ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಿಸಿಕೊಂಡಿರುವ ಕುಶಾಲನಗರದ ನಂ. 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನಲ್ಲಿ ರೂ 1 ಕೋಟಿ 11 ಲಕ್ಷದ 87 ಸಾವಿರ (1,11,87,757) ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 105 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸಂಘ ಸತತವಾಗಿ 9 ವರ್ಷಗಳಿಂದ ಕೋಟಿಗೂ ಮೀರಿ ಲಾಭಗಳಿಸುತ್ತಾ ಬಂದಿದೆ. 2025-26ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 20 ರಂದು ಭಾನುವಾರ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘವು ಲೆಕ್ಕ ಪರಿಶೋಧಾನ ವರದಿಯಲ್ಲಿ “ಏ” ತರಗತಿಯಲ್ಲಿ ವರ್ಗಿಕರಿಸಲಾಗಿದೆ.
ಸಂಘವು ಕಳೆದ ಸಾಲಿನಲ್ಲಿ 3656 ಸದಸ್ಯರಿಂದ, ರೂ 400.67 ಲಕ್ಷಗಳ ಪಾಲುಹಣ ಸಂಗ್ರಹಿಸಿದ್ದು, ವರದಿ ಸಾಲಿನಲ್ಲಿ 3729 ಸದಸ್ಯರಿಂದ ರೂ 421.17 ಲಕ್ಷಗಳ ಪಾಲುಹಣ ಸಂಗ್ರಹ ಮಾಡಿದ್ದು ರೂ 20.50 ಲಕ್ಷಗಳ ಹೆಚ್ಚುವರಿ ಪಾಲು ಹಣ ಸಂಗ್ರಹವಾಗಿರುತ್ತದೆ. ಸಂಘದ ದುಡಿಯುವ ಬಂಡವಾಳ ಕಳೆದ ಸಾಲಿನಲ್ಲಿ ರೂ 7853.02 ಲಕ್ಷ ಇದ್ದು ವರದಿ ಸಾಲಿನಲ್ಲಿ ದುಡಿಯುವ ಬಂಡವಾಳವನ್ನು ರೂ 9459.10 ಲಕ್ಷಗಳಷ್ಟು ಕ್ರೋಢೀಕರಿಸಿ ರೂ 1606.08 ಲಕ್ಷಗಳ ಹೆಚ್ಚಿಗೆ ಸಂಗ್ರಹ ಮಾಡಿರುತ್ತೇವೆ.
ಸಂಘವು ಕಳೆದ ಸಾಲಿನಲ್ಲಿ ರೂ 5763.26 ಲಕ್ಷಗಳು ಇದ್ದಂತಹ ಠೇವಣಿ ವರದಿ ಸಾಲಿನಲ್ಲಿ ವಿವಿಧ ಠೇವಣಿಗಳ ರೂಪದಲ್ಲಿ ರೂ. 7305.63 ಲಕ್ಷಗಳನ್ನು ಠೇವಣಿ ಹೊಂದಿದ್ದು, ಕಳೆದ ಸಾಲಿಗಿಂತ ಅಧಿಕ ರೂ 15 ಕೋಟಿ 42 ಲಕ್ಷಗಳ ಹೆಚ್ಚಿಗೆ ಠೇವಣಿ ಸಂಗ್ರಹಿಸಿದ್ದು, ಇದು ಸಂಘ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿರುವುದು ಮತ್ತು ಸಂಘದ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲೆ ಇಟ್ಟಿರುವ ಅಭಿಮಾನವೇ ಇದಕ್ಕೆ ಸಾಕ್ಷಿಯಾಗಿರುತ್ತದೆ ಎಂದರು.
ಸಂಘವು ಕಳೆದ 35 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರಿಗೆ ಕಳೆದ 15 ವರ್ಷಗಳಿಂದ ಶೇ.16 ರಿಂದ ಶೇ.25 ಡಿವಿಡೆಂಡ್ ನೀಡುತ್ತಿದ್ದು, ಸಂಘದ ‘ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ 25 ರೀತಿಯ ವಿವಿಧ ಸಾಲಗಳನ್ನು ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಾಲಿನಲ್ಲಿ ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ.
ಸದಸ್ಯರು ಸಾಲಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕಾಗಿಯೂ ಹಾಗೂ ಪಡೆದುಕೊಂಡಂತಹ ಸಾಲಗಳನು ಸಕಾಲದಲ್ಲಿ ಮರುಪಾವತಿ ಮಾಡಬೇಕಾಗಿ ವಿನಂತಿಸಿದರು.
ಸಂಘವು ಶತಮಾನೋತ್ಸವ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರಿನಲ್ಲಿ 2 ಎಕರೆ ನಿವೇಶನದಲ್ಲಿ ಕೈಗೊಂಡಿರುವ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ 2027ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕೆ.ವಿ.ನೇತ್ರಾವತಿ, ನಿರ್ದೇಶಕರಾದ ವಿ.ಎಸ್.ಆನಂದಕುಮಾರ್, ಕೆ.ಎನ್.ದೇವರಾಜ್, ಎಂ
ಎಂ.ಚರಣ್, ಪಿ.ಬಿ.ಯತೀಶ್, ಪಿ.ಎಂ.ಕವಿತಾ, ಎಂ.ಎಸ್.ರಾಜೇಶ್, ಹೆಚ್.ಎಂ.ಮಧುಸೂದನ್, ಕೆ.ಜಿ.ಮನು, ಪ್ರಸನ್ನ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಇದ್ದರು.
ಹೆಚ್ಚಿನ ವಿವರ:
ವರದಿ ಸಾಲಿನಲ್ಲಿ ಸದಸ್ಯರಿಗೆ ಕೆ.ಸಿ.ಸಿ ಸಾಲವನ್ನು 84.58 ಲಕ್ಷಗಳನ್ನು ಪಾವತಿಸಿದ್ದು, ಇನ್ನೂ ವಿತರಿಸಲು ಕ್ರಮತೆಗೆದುಕೊಂಡಿರುತ್ತೇವೆ. ಕೆಲವು ಸದಸ್ಯರಿಗೆ ಬೇರೆ ವಿವಿಧರೀತಿಯ ಸಾಲಗಳನ್ನು ಕಳೆದ ಸಾಲಿನಲ್ಲಿರೂ. 5174.06 ಲಕ್ಷಗಳನ್ನು ವಿತರಿಸಿದ್ದು, ವರದಿ ಸಾಲಿನಲ್ಲಿ ವಿವಿಧ ರೀತಿಯ ಸಾಲಗಳನ್ನುರೂ. 5549.49 ಲಕ್ಷಗಳನ್ನು ವಿತರಿಸಿದ್ದು ರೂ, 375.43 ಲಕ್ಷಗಳ ಹೆಚ್ಚಿಗೆ ಸಾಲ ವಿತರಿಸಿರುತ್ತೇವೆ. ಸಂಘದ ಸ್ವಂತ ಬಂಡವಾಳದಿಂದ ರೂ. 33 ಲಕ್ಷಗಳನ್ನು ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆ.
ಕಳೆದ ಸಾಲಿನಲ್ಲಿ ಸುಸ್ತಿ ಸಾಲದ ಪ್ರಮಾಣವು ರೂ.206.88 ಲಕ್ಷಗಳಷ್ಟಿದ್ದು, ವರದಿ ಸಾಲಿನಲ್ಲಿರೂ.220.85ಲಕ್ಷಗಳಷ್ಟುಸುಸ್ತಿ ಸಾಲ ಇರುತ್ತದೆ. ಕ್ಷೇಮನಿಧಿಯಲ್ಲಿ ಈ ಸಾಲಿನಲ್ಲಿ ರೂ.490.87 ಲಕ್ಷಗಳಿದ್ದು, ಕ್ಷೇಮನಿಧಿ ಮೊಬಲಗನ್ನು ಪೂರ್ತಿಕೊಡಗುಜಿಲ್ಲಾ ಸಹಕಾರಕೇಂದ್ರ ಬ್ಯಾಂಕ್ನಲ್ಲಿಠೇವಣಿ ಮಾಡಲಾಗಿದ್ದು,ಕಟ್ಟಡ ನಿಧಿ ರೂ440.16 ಲಕ್ಷಗಳಿದ್ದು 2025-2026 ನೇ ಸಾಲಿನ ಲಾಭವಿಲೇವಾರಿಯಲ್ಲಿ ರೂ.47.93 ಲಕ್ಷ ಸೇರಿಕಟ್ಟಡ ನಿಧಿಯಲ್ಲಿಒಟ್ಟು ರೂ.488.09 ಲಕ್ಷಗಳಿದ್ದು ಈ ಮೊಬಲಗು ಸಂಘವು ಉದ್ದೇಶಿಸಿರುವ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಸಹಕಾರಿಯಾಗಿರುತ್ತದೆ. ಸಂಘದಲ್ಲಿ ವಿವಿಧರೀತಿಯ ಇತರೆ ನಿಧಿಗಳಲ್ಲಿ ರೂ286,75ಲಕ್ಷಗಳು ಕ್ರೋಡಿಕೃತವಾಗಿರುತ್ತದೆ. ಇದು ಸಂಘದ ಸುಭದ್ರತೆಯನ್ನು ಸಾಬೀತುಪಡಿಸುತ್ತದೆ.
ವರದಿ ಸಾಲಿನಲ್ಲಿರೂ. 317.75 ಕೋಟಿ ವಾರ್ಷಿಕ ವಹಿವಾಟು ನಡೆಸಿರುತ್ತೇವೆ. ವರದಿ ಸಾಲಿನಲ್ಲಿರೂ. 1.11 ಕೋಟಿ ನಿವ್ವಳ ಲಾಭಗಳಿಸಿರುತ್ತೇವೆ. ಸಂಘವು ಕಳೆದ 35 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರಿಗೆ ಕಳೆದ 15 ವರ್ಷಗಳಿಂದ ಶೇ.16 ರಿಂದ ಶೇ.25 ಡಿವಿಡೆಂಡ್ ನೀಡುತ್ತಿದ್ದು, ಸಂಘವು ಸದಸ್ಯರ ಅನುಕೂಲಕೋಸ್ಕರತ್ಯಾಗರಾಜರಸ್ತೆಯಲ್ಲಿರುವ 8.60 ಸೆಂಟ್ಸ್ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಸುಲಲಿತವಾಗಿ ಸದಸ್ಯರ ಸೇವೆಗೆ ಅನುಕೂಲವಾಗುವಂತೆ ವ್ಯವಹಾರವನ್ನು ನಡೆಸುತ್ತಿದ್ದೇವೆ. ಸಂಘದ ‘ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ 25 ರೀತಿಯ ವಿವಿಧ ಸಾಲಗಳನ್ನು ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರತಿ ಸದಸ್ಯನ ಕೊಡುಗೆ ಕೂಡ ಇರುವುದು.
ಈ ಸಾಲಿನಲ್ಲಿ ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ. ಸದಸ್ಯರು ಸಹಕರಿಸಬೇಕೆಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಕೋರಿಕೊಂಡಿರುತ್ತೇವೆ.
ವರದಿ ಸಾಲಿನಲ್ಲಿರೂ, 317.75ಕೋಟಿ ವಾರ್ಷಿಕ ವಹಿವಾಟು ನಡೆಸಿರುತ್ತೇವೆ. ವರದಿ ಸಾಲಿನಲ್ಲಿರೂ. 1.11ಕೋಟಿ ನಿವ್ವಳ ಲಾಭಗಳಿಸಿರುತ್ತೇವೆ. ಸಂಘವು ಕಳೆದ 35 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರಿಗೆ ಕಳೆದ 15 ವರ್ಷಗಳಿಂದ ಶೇ.16 ರಿಂದ ಶೇ.25 ಡಿವಿಡೆಂಡ್ ನೀಡುತ್ತಿದ್ದು, ಸಂಘವು ಸದಸ್ಯರ ಅನುಕೂಲಕೋಸ್ಕರತ್ಯಾಗರಾಜರಸ್ತೆಯಲ್ಲಿರುವ 8.60 ಸೆಂಟ್ಸ್ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಸುಲಲಿತವಾಗಿ ಸದಸ್ಯರ ಸೇವೆಗೆ ಅನುಕೂಲವಾಗುವಂತೆ ವ್ಯವಹಾರವನ್ನು ನಡೆಸುತ್ತಿದ್ದೇವೆ. ಸಂಘದ ‘ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ 25 ರೀತಿಯ ವಿವಿಧ ಸಾಲಗಳನ್ನು ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರತಿ ಸದಸ್ಯನಕೊಡುಗೆಕೂಡ ಇರುವುದು.
ಈ ಸಾಲಿನಲ್ಲಿ ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ. ಸದಸ್ಯರು ಸಹಕರಿಸಬೇಕೆಂದುಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಕೋರಿಕೊಂಡಿರುತ್ತೇವೆ.
ಹಿಂದಿನ ಸಾಲುಗಳಲ್ಲಿ ಸಾಲಗಾರ ಸದಸ್ಯರಿಗೋಸ್ಕರ ಹೊಸದಾಗಿ ಸಾಲಗಾರ ಸದಸ್ಯರ ಮರಣೋತ್ತರ ಪರಿಹಾರ ನಿಧಿಯಯೋಜನೆಯನ್ನು ಸಂಘದಲ್ಲಿ ಪ್ರಾರಂಭಿಸಿದ್ದು ಈ ಯೋಜನೆಗೆ ಸದಸ್ಯರುಉತ್ತಮ ಪ್ರತಿಕ್ರಿಯೆಯನ್ನು ಹೊಂದಿದ್ದು ಕೇವಲ 6 ವರ್ಷಗಳಲ್ಲಿ ಸದಸ್ಯರಠೇವಣಿ ಮತ್ತು ಸದಸ್ಯರು ತೊಡಗಿಸಿರುವ ಠೇವಣಿಯನ್ನು ಸಂಘದಲ್ಲೆ ಅತೀ ಹೆಚ್ಚಿನ ಬಡ್ಡಿದರದಲ್ಲಿ ತೊಡಗಿಸಿಕೊಂಡಿದ್ದು ಅಲ್ಲದೆ ಲಾಭವಿಲೇವಾರಿಯಿಂದಸೇರಿಸಿವರದಿ ಸಾಲಿಗೆ ಒಟ್ಟು ಮೊಬಲಗು ರೂ88.09 ಲಕ್ಷಗಳಾಗಿದ್ದು, ಮರಣ ಹೊಂದಿದ ಸದಸ್ಯರ ಸಾಲವನ್ನು ಅವರಕುಟುಂಬಸ್ಥರು ಮರುಪಾವತಿಸುವಾಗ ಈ ನಿಧಿಯಿಂದ ನಿಯಾಮಾನುಸಾರ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ನಿಗಧಿ ಮಾಡಿರುವಹಾಲಿ ಸದಸ್ಯರು ಸದ್ರಿ ನಿಧಿಯಲ್ಲಿ ಹೂಡಿರುವ ಮೊತ್ತಕ್ಕೆ 9 ಪಟ್ಟುಮೊತ್ತವನ್ನು ಸಾಲದಖಾತೆಗೆ ಹೊಂದಾಣಿಕೆ ಮಾಡಿ ಮೃತ ಸಾಲಗಾರ ಸದಸ್ಯನಕುಟುಂಬಕ್ಕೆಸಾಲವನ್ನು ಚುಕ್ತ ಮಾಡಲು ಸಹಾಯ ಮಾಡುವಉದ್ದೇಶದಿಂದ ಈ ನಿಧಿ ಅನುಕೂಲವಾಗುವುದೆಂದು ತಿಳಿಯಪಡಿಸುತ್ತೇವೆ.
ಹಾಗೂ ಸಂಘದಲ್ಲಿ ಸದಸ್ಯರು ಮರಣ ನಿಧಿಯ ಪೂರ್ಣ ಪ್ರಮಾಣದ ವಂತಿಕೆಯನ್ನು ಪಾವತಿಸಿದ್ದಲ್ಲಿ, ಅಂದರೆ 60 ವರ್ಷ ಒಳಪಟ್ಟವರು ರೂ.1.000/- ಮತ್ತು 60 ವರ್ಷ ಮೇಲ್ಪಟ್ಟವರು ರೂ.1500/- ವಂತಿಕೆ ಪಾವತಿಸಿದ್ದಲ್ಲಿ.ಅಂತಹ ಸದಸ್ಯರು ಮೃತಹೊಂದಿದ ಸಂದರ್ಭದಲ್ಲಿವಂತಿಕೆ ಸೇರಿಸಿ ರೂ.10,000/- ಗಳನ್ನು ಮರಣ ಪರಿಹಾರ ನಿಧಿಯಿಂದ ಮೃತ ಹೊಂದಿದವರ ಅಂತ್ಯಕ್ರಿಯೆ ಕಾರ್ಯಗಳಿಗೆ ಪರಿಹಾರಧನವನ್ನಾಗಿ ನೀಡುತ್ತಿರುತ್ತೇವೆ.
ಸಂಘದಕಾರ್ಯವ್ಯಾಪ್ತಿಯಲ್ಲಿನ ಮಹಿಳಾ ಸದಸ್ಯರು ಮತ್ತು ನಾಮಮಾತ್ರ ಸದಸ್ಯರ ಮಹಿಳೆಯರನ್ನು ಆರ್ಥಿಕವಾಗಿಸಬಲರನ್ನಾಗಿಸಲು ನಾವುಗಳು ಪ್ರಾರಂಭಿಸಿದ ವನಿತಾ ಬಂಧು ಮತ್ತುಜನಚೈತನ್ಯ ಎಂಬ ಜಂಟಿ ಭಾದ್ಯತಾ ಗುಂಪು ಸಾಲ ಯೋಜನೆಯು ಯಶಸ್ವಿಯಾಗಿದ್ದು ಈ ಯೋಜನೆಯಡಿಯಲ್ಲಿಒಟ್ಟು704 ಮಹಿಳೆಯರಿಗೆ ವರದಿ ಸಾಲಿನಲ್ಲಿರೂ343.4 ಲಕ್ಷಗಳಷ್ಟು ಸಾಲ ವಿತರಿಸಿದ್ದು ವಾರ್ಷಿಕಆಂತ್ಯಕ್ಕೆಒಟ್ಟಾಗಿ5.90ಕೋಟಿ ಬರಲು ಬಾಕಿಯಿದ್ದು ಸಾಲದಯೋಜನೆಯಿಂದಎಲ್ಲಾ ವರ್ಗದ ಮಹಿಳೆಯರು ಆರ್ಥಿಕ ಸಬಲತೆಯತ್ತ ಹೋಗುತ್ತಿರುವುದು ಸಂಘಕ್ಕೆ ಒಂದು ಹೆಗ್ಗಳಿಕೆಯ ವಿಚಾರವಾಗಿರುತ್ತದೆ. ಈ
ಈ ಮೇಲಿನ ಜಂಟಿ ಬಾದ್ಯತಾ ಗುಂಪು ಸಾಲವನ್ನು ತೆಗೆದುಕೊಂಡಿರುವಂತಹ ಪ್ರತಿ ಸದಸ್ಯರಿಂದ ಸಾಲಕ್ಕೆ ಅನುಗುಣವಾಗಿ ವಿಮೆಯನ್ನುಕಟಾಯಿಸುತ್ತಿದ್ದು, ಈ ಕಟಾಯಿಸಿದ ವಿಮೆ ಮೊಬಲಗನ್ನು ಸಂಘದಲ್ಲಿ ಹೆಚ್ಚು ಬಡ್ಡಿಗೆ ವಿನಿಯೋಗ ಮಾಡಿ ಗುಂಪಿನ ಸಾಲಗರ ಸದಸ್ಯರು ಮರಣ
ಹೊಂದಿದಸಮಯದಲ್ಲಿ ಪೂರ್ತಿ ಸಾಲವನ್ನು ಈ ವಿಮಾ ಹಣದಿಂದ ಪಾವತಿಸಿ ಸಾಲವನ್ನು ಚುಕ್ತ ಗೊಳಿಸಲುಕ್ರಮಕೈಗೊಂಡಿದ್ದು ಸದಸ್ಯರಿಂದ ಕಟಾಯಿಸಿದ ಮೊಬಲಗು ಮತ್ತು ಸಂಘದಿಂದ ನೀಡಿರುವಂತ ಬಡ್ಡಿ ಸೇರಿ ವಿಮೆ ಮೊತ್ತವು ರೂ.30.20 ಲಕ್ಷಗಳಷ್ಟು ಆಗಿರುತ್ತದೆ.
ಸಂಘದ ಸದಸ್ಯರುಗಳಿಗೆ ಸಂಘದಿಂದ ವಿತರಿಸುವ ಸಾಲಗಳ ಮಿತಿಯನ್ನು ಕೆಳಕಂಡಂತೆ ಹೆಚ್ಚಿಸಲಾಗಿದೆ
[l] ಜಾಮೀನು ಸಾಲದ ಮಿತಿರೂ 3 ಲಕ್ಷದ [2] ಮದ್ಯಮಾವಧಿಗಿರ್ವಿ ಸಾಲದ ಮಿತಿ (ಮನೆ ರಿಪೇರಿ ) ರೂ.5 ಲಕ್ಷ [3] ನಿವೇಶನ/ಕಟ್ಟಡ/ವಾಣಿಜ್ಯ ಮಳಿಗೆ ವಾಸದ ಮನೆ ಖರೀದಿ ಮತ್ತು ನೂತನ ಗೃಹ ಮತ್ತುವಾಣಿಜ್ಯಕಟ್ಟಡ ನಿರ್ಮಾಣ ಸಾಲ ರೂ1 ಕೋಟಿ
[4] ವ್ಯಾಪಾರ, ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲು ವ್ಯಾಪಾರಾಭಿವೃದ್ಧಿ ದೀರ್ಘಾವದಿ ಸಾಲ ರೂ 50 [5] ಹೊಸ ವಾಹನ ಖರೀದಿ ರೂ. 25 ಲಕ್ಷ [6] ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ ವ್ಯಾಪಾರ ಮೀರಳತೆ ಸಾಲ ರೂ| ಕೋಟಿ [7] ವ್ಯಾಪಾರಭಿವೃದ್ಧಿಸಾಲ ಮಿತಿರೂ. 3 ಲಕ್ಷ [8] ವನಿತಾ ಬಂಧು ಮಹಿಳಾ ಗುಂಪು ಸಾಲ 5ಲಕ್ಷದ ವರೆಗೆ [9] ಸ್ವ-ಸಹಾಯ ಗುಂಪು ಸಾಲ ಮಿತಿರೂ. 15 ಲಕ್ಷ [10]ಆಭರಣಆಡಮಾನ ಸಾಲಗಳ ಮಿತಿ ರೂ.40 ಲಕ್ಷಗಳುಮೇಲಿನ ಎಲ್ಲಾ ಸಾಲಗಳನ್ನು ಷರತ್ತುಗಳಿಗನ್ವಯ ಅತಿ ಶೀಘ್ರದಲ್ಲಿ ಸದಸ್ಯರಿಗೆ ನೀಡಲಾಗುವುದು.
ನಮ್ಮಸಂಘದ ಸದಸ್ಯರು ಸಾಲಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕಾಗಿಯೂ ಹಾಗೂ ಪಡೆದುಕೊಂಡಂತಹ ಸಾಲಗಳನು ಸಕಾಲದಲ್ಲಿ ಮರುಪಾವತಿ ಮಾಡಬೇಕಾಗಿ ತಮ್ಮಗಳಿಗೆ ತಿಳಿಯಪಡಿಸುತ್ತಿದ್ದೇವೆ.
ಸಂಘದಲ್ಲಿ ತೊಡಗಿಸಿರುವ ನಿರಖುಠೇವಣಿಗೂ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತುಧಾರ್ಮಿಕಸಂಘ ಸಂಸ್ಥೆಗಳಿಗೆ ಶೇಕಡಾ 0.25 ಹೆಚ್ಚಿನ ಬಡ್ಡಿ ನೀಡುತ್ತಿದ್ದೇವೆ. ಸಂಘದ ನೂತನ ಕಟ್ಟಡದಲ್ಲಿಆರ್.ಬಿ.ಐ. ಮಾನದಂಡದಂತೆ ನಿರ್ಮಾಣ ಮಾಡಿರುವ ಭದ್ರತಾ ಕೊಠಡಿಯೊಳಗೆ ಲಾಕರ್ ಸೌಲಭ್ಯವು ಸದಸ್ಯರು ಮತ್ತು ಗ್ರಾಹಕರಿಗೆ ದೊರೆಯುತ್ತದೆ.
ಪ್ರತಿ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ 10ನೇ ತರಗತಿ, ದ್ವಿತೀಯಪಿ.ಯು.ಸಿ., ಅಂತಿಮ ಪದವಿ ಪರೀಕ್ಷೆ, ಡಿಪ್ಲೊಮ ಮತ್ತುಕೊನೆಯಇಂಜಿನಿಯರಿಂಗ್ ಪರೀಕ್ಷೆ, ವೈದ್ಯಕೀಯ ಪದವೀಧರರಿಗೂಉತ್ತಮ ಅಂಕಗಳಿಸಿರುವಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ಕಳೆದ 15 ವರ್ಷಗಳಿಂದಲೂ ನೀಡುತ್ತಿದ್ದೇವೆ. ಸದಸ್ಯರ ಮಕ್ಕಳು ರಾಷ್ಟ್ರಮಟ್ಟದಲ್ಲಿ. ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವ ಕ್ರೀಡಾಸ್ಪರ್ಧಿಗಳಿಗೆ ಬಹುಮಾನ ವ್ಯವಸ್ಥೆ ಮಾಡುತ್ತಿದ್ದೇವೆ.
ಸಂಘವು ಶತಮಾನೋತ್ಸವ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲುಗುಡ್ಡೆಹೊಸೂರಿನಲ್ಲಿ 2 ಎಕರೆ ನಿವೇಶನದಲ್ಲಿ ಶತಮಾನೋತ್ಸವ ಭವನಕಟ್ಟಡಕಾಮಗಾರಿಯುಮುಗಿಯುವ ಹಂತಕ್ಕೆ ಬಂದಿರುತ್ತದೆ.ಮುಂದಿನ 2027ರ ಫೆಬ್ರವರಿಅಥವಾ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳಿಸಬಹುದೆಂಬ ನಂಬಿಕೆಯು ನಮ್ಮದಾಗಿರುತ್ತದೆ.
ಸಹಕಾರ ನಮ್ಮ ಗಂಟೆಯೊಂದನ್ನು ನೀಡಿರುತ್ತೇವೆ. ಹಾಗೂ ಹಾಗೂ 2025-2026ನೇ ಸಾಲಿನಲ್ಲಿಒಟ್ಟಾಗಿರೂ. 91000/- ಗಳನ್ನು ಸಂಘದಿಂದಕನ್ನಂಬಾಡಮ್ಮದೇವಸ್ಥಾನಕ್ಕೆ 0.19000/-ಸರ್ವಾಜನಿಕ ಸೇವೆಗೆ ನೀಡಿರುತ್ತೇವೆ.ಇದುನಾವುಗಳ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಒಂದುಉದಾಹರಣೆಯಾಗಿದೆ ಎಂದು ತಿಳಿಸಿದರು.



