ಕೂಡಿಗೆ, ಜು. 15: ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯ ವತಿಯಿಂದ ಕೂಡಿಗೆ ಡೈರಿ ಸರ್ಕಲ್ ನಲ್ಲಿ ದ್ವಿಚಕ್ರ ವಾಹನಗಳ ಸವಾರರಿಗೆ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಿ ಎಂಬ ಸಂದೇಶದೊಂದಿಗೆ ಮಾಹಿತಿಯನ್ನು ಒದಗಿಸುವ ಮೂಲಕ ತಿಳುವಳಿಕೆಯನ್ನು ನೀಡಲಾಯಿತು.
ಈ ಆಂದೋಲನಕ್ಕೆ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ ರವರು ಚಾಲನೆ ನೀಡಿ , ನಂತರ ಮಾತಾನಾಡುತ್ತಾ ಯುವಕರು ಹೆಚ್ಚಾಗಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ತಮ್ಮ ಜೀವ ರಕ್ಷಿಸಿಕೊಳ್ಳಬೇಕಾಗುತ್ತದೆ. ವಾಹನ ಸವಾರರು ತಮ್ಮ ವಾಹನಗಳ ದಾಖಲೆ, ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಯ ಪತ್ರಗಳನ್ನು ಇಲಾಖೆಯ ನಿಯಮಾನುಸಾರ ಇಟ್ಟುಕೊಂಡು ವಾಹನಗಳ ಚಾಲನೆ ಮಾಡಬೇಕಾಗುವುದು. ಪ್ರತಿಯೊಬ್ಬರೂ ಸಹ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮುಖೇನ ತಮ್ಮ ಜೀವ ರಕ್ಷಣೆಗೆ ಮುಂದಾಗಬೇಕೆಂದು ಇಲಾಖೆಯ ಸವಿಸ್ತಾರವಾದ ಮಾಹಿತಿಯನ್ನು ರಾಮಚಂದ್ರ ರವರು ನೀಡಿದರು.
ಇದೇ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿ ಎಂಬ ಕರಪತ್ರಗಳನ್ನು ವಾಹನ ಸವಾರರಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಠಾಣಾಧಿಕಾರಿ ರಾಮಚಂದ್ರ, ಅಪರಾಧ ವಿಭಾಗದ ಠಾಣಾಧಿಕಾರಿ ಸ್ವಾಮಿ, ಸಹಾಯಕ ಠಾಣಾಧಿಕಾರಿ ವಿಜಯ್ ಸೇರಿದಂತೆ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಇದ್ದರು.
Back to top button
error: Content is protected !!