ಕುಶಾಲನಗರ, ಆ 10:ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ನೇರುಗಳಲೆ ಶಾಲಾ ವಿದ್ಯಾರ್ಥಿಗಳಿಗೆ ಶ್ರೀಯುತ ಗಣೇಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಉಚಿತವಾಗಿ ಟ್ರಾಕ್ ಸೂಟ್ ನೀಡಿದರು.ಟ್ರಾಕ್ ವಿತರಣೆ ಮಾಡಿ,ಮಾತನಾಡಿದ ಗಣೇಶ್ ಅವರು ವಿದ್ಯಾರ್ಥಿಗಳು ಸಂಸ್ಕಾರಯುತ ಹಾಗೂ ಮೌಲ್ಯಯುತ ಶಿಕ್ಷಣ ಪಡೆದು,ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು.ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನಿಮ್ಮ ಹೆಗಲ ಮೇಲೆಯೆ ಇದೆ,ಎಲ್ಲರೂ ತಾವು ಕಲಿತ ಶಾಲೆಗೆ ಹಾಗೂ ತಮ್ಮ ಗ್ರಾಮಕ್ಕೆ ಹೆಸರು ತಂದುಕೊಡುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿಕೊಟ್ಟರು. ಹಾಗೆಯೆ ನಿಕಟಪೂರ್ವ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ರವಿಕುಮಾರ್ ಕೆ ಎನ್ ವಿದ್ಯಾರ್ಥಿಗಳಿಗೆ ಗುರುತಿನ ಪತ್ರವನ್ನು ನೀಡಿದರು.ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವದಾಸು.ಕೆ ಎನ್ ಪಾಪಯ್ಯ,ಕಾರ್ಯದರ್ಶಿಯಾದ ವಿನಯ್ ಸಂಭ್ರಮ್,ಖಜಾಂಚಿಯಾದ ತಿಮ್ಮಯ್ಯ,ನಿರ್ದೇಶಕರಾದ ಅಶ್ವತ್ ಸಿ ಸಿ,ಕಿರಣ್,ಶ್ರೀಮತಿ ಪುಷ್ಪಾ.ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗಂಗಾಧರ,ಅಲ್ಫೋನ್ಸೋ ಲೋಬೊ,ಕುಮಾರ್,ಸೀನ,ಯಶೋದ,ಲತಾ ಹಾಗೂ ಸೀಮಾ ಲೂಯಿಸ್ ಅವರು ,ಶಾಲಾ ಮುಖ್ಯೋಪಾಧ್ಯಯರಾದ ಶ್ರೀಮತಿ ರಾಜೇಶ್ವರಿ ಹೆಚ್ ಎಸ್,ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸೋಮವಾರಪೇಟೆ ತಾಲ್ಲೂಕಿನ ಅಧ್ಯಕ್ಷರಾದ ರತ್ನಕುಮಾರ ಕೆ ಆರ್ ಹಾಗೂ ಇನ್ನಿತರ ಶಿಕ್ಷಕರು ಹಾಜರಿದ್ದರು*
Back to top button
error: Content is protected !!