ಕುಶಾಲನಗರ, ಆ 27: ಮಾದಾಪಟ್ಟಣದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬೆಣಗಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೊಬೋಟಿಕ್ಸ್ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನೌಕರರ ಸೌಹಾರ್ದ ವೇದಿಕೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು
ಕುಶಾಲನಗರ
ತಾಲೂಕು ಪ್ರಭಾರ
ತಹಸೀಲ್ದಾರ್ ಕೃಷ್ಣಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರಕಾರಿ ನೌಕರರ ಸೌಹಾರ್ದ ವೇದಿಕೆಯ ಜನಪರ ಕಾಳಜಿ, ಸಾಮಾಜಿಕ ಚಟುವಟಿಕೆಗಳ ಚಿಂತನೆ ಸ್ವಾಗತಾರ್ಹ. ಕೇವಲ ಮನರಂಜನೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ , ಸರಕಾರದ ಅನುದಾನಗಳನ್ನು ನಿರೀಕ್ಷಿಸದೆ ಹಳ್ಳಿಗಾಡಿನ ಬಡ ವಿದ್ಯಾರ್ಥಿಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ವೈಯುಕ್ತಿಕವಾಗಿ ಸೇವೆ ಸಲ್ಲಿಸುವುದು ನಿಜವಾದ ಜನಪರ ಕಾಳಜಿ ಎನ್ನಬಹುದು. ಈ ನಿಟ್ಟಿನಲ್ಲಿ ನೌಕರರ ಸೌಹಾರ್ದ ವೇದಿಕೆಯ ಪದಾಧಿಕಾರಿಗಳ ನಿಸ್ವಾರ್ಥ ಸೇವೆ ಸದಾ ಮುಂದುವರೆಯಲಿ ಎಂದು ಆಶಿಸಿದರು. ವಿದ್ಯಾರ್ಥಿಗಳು ಪ್ರಸಕ್ತ ಕಾಲಘಟ್ಟದಲ್ಲಿ ಪ್ರಚಲಿತ ತಾಂತ್ರಿಕ ಶಿಕ್ಷಣ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಮಾದಾಪಟ್ಟಣ ಶಾಲಾ ಮುಖ್ಯ ಶಿಕ್ಷಕ ಶಶಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರಿ ಶಾಲೆಯ ಬಡ ಮಕ್ಕಳಿಗೆ ನಿಲುಕದ ಸೌಲಭ್ಯಗಳು, ಆಧುನಿಕ ಎಐ, ರೋಬೋಟಿಕ್ಸ್, ಅಬಾಕಸ್ ಶಿಕ್ಷಣವನ್ನು ಒದಗಿಸುವಲ್ಲಿ ದಾನಿಗಳು ಮುಂದಾಗುವ ಮೂಲಕ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತಾಸೆಯಾಗಿರುವುದು ಶ್ಲಾಘನೀಯ ವಿಚಾರ ಎಂದರು.
ಸೌಹಾರ್ದ ವೇದಿಕೆಯ ಪ್ರಮುಖರು ಹಾಗೂ ದಾನಿಗಳಾದ ಲೋಕೋಪಯೋಗಿ ಇಲಾಖೆ ಅಭಿಯಂತರ
ಸೈಜನ್ ಪೀಟರ್, ನೀರಾವರಿ ಇಲಾಖೆ ಅಭಿಯಂತರ ಡಿ.ಡಿ.ಕಿರಣ್, ಉದ್ಯಮಿಗಳಾದ ನವೀನ್, ಸುಗುರಾಜ್, ರಾಜೇಶ್, ಸೋನಿ ಮಾಥ್ಯು, ಗುತ್ತಿಗೆದಾರ ಯೋಗೇಶ್ ಪಟೇಲ್ ಅವರ ತಂಡದಿಂದ ರೋಬೋಟಿಕ್ ಕಲಿಕೆಗೆ ಪ್ರಾಯೋಜಕತ್ವ ನೀಡಲಾಗಿದೆ.
ಈ ಸಂದರ್ಭ ಓಜಸ್ವಿ ಫೌಂಡೇಶನ್ ಟ್ರಸ್ಟಿಗಳಾದ ಡಾ.ಕವಿತಾ, ಬ್ರಿಜೇಶ್, ತರಬೇತುದಾರೆ ಪವಿತ್ರಾ, ಬೆಣಗಾಲಿನ ಮಾಜಿ ಜನಪ್ರತಿನಿಧಿ ಧನರಾಜು ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಇದ್ದರು.
Back to top button
error: Content is protected !!