ಶಿಕ್ಷಣ

ಹೆಬ್ಬಾಲೆ ಪ್ರೌಢಶಾಲೆಯ ಕಟ್ಟಡದ ಮೇಲ್ಛಾವಣಿಯ ಉದ್ಘಾಟನೆ ಸಮಾರಂಭ

ಕುಶಾಲನಗರ, ಆ 17: ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬಗ್ಗೆ ವಿಸ್ತೃತ ವಾಗಿ ಅಧ್ಯಯನ ನಡೆಸುವ ಮೂಲಕ ಅದಕ್ಕೆ ಒದಗಿ ಬಂದಿರುವ ಅಪಾಯವನ್ನು ತಪ್ಪಿಸಿ ಅದನ್ನು ಸಂರಕ್ಷಿಸುವತ್ತ ಮುಂದಾಗಬೇಕೆಂದು ಸಾಹಿತಿ ನಾಪಂಡ ಮುದ್ದಪ್ಪ ಕರೆ ಕೊಟ್ಟರು.

25 ಲಕ್ಷ ವೆಚ್ಚದಲ್ಲಿ ನವೀಕರಿಸಿದ ಶಿಥಿಲಾವಸ್ಥೆ ತಲುಪಿದ್ದ ಹೆಬ್ಬಾಲೆ ಪ್ರೌಢಶಾಲೆಯ ಕಟ್ಟಡದ ಮೇಲ್ಛಾವಣಿಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಇಂದಿನ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಅರಿತು ಅದರಂತೆ ನಡೆಯುವ ಮೂಲಕ ಅದರ ಮೌಲ್ಯವನ್ನು ಗೌರವಿಸಬೇಕು.
ಕಳೆದ ಹಲವು ವರ್ಷಗಳಿಂದಲೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸದೇ ಚುನಾಯಿತ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡುತ್ತಿರುವ ಅಪಚಾರವಾಗಿದೆ ಎಂದು ಮುದ್ದಪ್ಪ ವಿಷಾದಿಸಿದರು.
ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಹೆಬ್ಬಾಲೆಯ ಮಾಜಿ ಯೋಧ ಹೆಚ್.ಎಸ್.ಕೃಷ್ಣಪ್ಪ ವಿದ್ಯಾರ್ಥಿ ಗಳು ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿದ್ದಷ್ಟೇ ಬಳಸಬೇಕು.
ವಿದ್ಯೆಗಿಂತಲೂ ಮುಖ್ಯವಾಗಿ ಉತ್ತಮ ಸಂಸ್ಕಾರಗಳನ್ನು ಹೊಂದಬೇಕು.
ದೇಶಸೇವೆಗೆ ಸದಾ ಕಟಿಬದ್ಧರಾಗಿರಬೇಕು ಎಂದು ಕರೆಕೊಟ್ಟರು.
ಡಾ.ಸಂಗೀತಾ ಮುದ್ದಪ್ಪ ವಿದ್ಯಾರ್ಥಿಗಳಿಗೆ ಅಗತ್ಯವಾದ ಆರೋಗ್ಯ ಮಾಹಿತಿ ಒದಗಿಸಿದರು.
ಉದ್ಯಮಿ ನಾಪಂಡ ಮುತ್ತಪ್ಪ, ನಿವೃತ್ತ ಯೋಧ ಪುಟ್ಟೇಗೌಡ ಮಾತನಾಡಿದರು.
*25 ಲಕ್ಷ ವೆಚ್ಚದಲ್ಲಿ ನವೀಕರಣ*
ಶಿಥಿಲಾವಸ್ಥೆ ತಲುಪಿದ್ದ ಹೆಬ್ಬಾಲೆ ಪ್ರೌಢಶಾಲೆಯ ಹಳೆಯ ಮೇಲ್ಛಾವಣಿಯನ್ನು ತೆರವುಗೊಳಿಸಿ 25 ಲಕ್ಷ ವೆಚ್ಚ ಹಣವನ್ನು ಭರಿಸಿ ಅತ್ಯಾಕರ್ಷಕ ವಾಗಿ ನವೀಕರಿಸಿ ಕೊಟ್ಟ ಶಾಲೆಯ ಹಳೆಯ ವಿದ್ಯಾರ್ಥಿ ನಾಪಂಡ ಮುದ್ದಪ್ಪ ಹಾಗೂ ಮುತ್ತಪ್ಪ ಸಹೋದರರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಹೆಬ್ಬಾಲೆ ಪ್ರೌಢಶಾಲೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ,
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರ ಸೇವೆ ಸ್ಮರಣೀಯವಾದುದು ಎಂದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೊಲ್ಲಿ ರಾಜಶೇಖರ್, ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಬ್ರಮಣ್ಯ, ಖಜಾಂಚಿ ಉಮೇಶ್ ಭಟ್,
ಕಾಲೇಜು ವಿಭಾಗದ ಪ್ರಾಂಶುಪಾಲ ವಿಜಯಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ,
ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಪ್ರಸನ್ನರೆಡ್ಡಿ, ಮಹದೇವ, ಬಾಂಬೆ ಪುಟ್ಟರಾಜು, ಶ್ರೀಧರ,ಚಂದ್ರಕುಮಾರ್, ಸುದರ್ಶನ್, ರವಿ, ವಿಜಯಕುಮಾರ್ ಇದ್ದರು.
ಶಾಲಾ ಶಿಕ್ಷಕರಾದ ಕವಿತಾ ಪುಟ್ಟೇಗೌಡ ಹಾಗು ಸಿ.ಡಿ.ಲೋಕೇಶ್ ನಿರೂಪಿಸಿದರು.
ವಿಜಯಕುಮಾರ್ ಸ್ವಾಗತಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!