ಕಾರ್ಯಕ್ರಮ

ಕುಶಾಲನಗರ ತಾಲ್ಲೂಕು ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಘಟಕ ಉದ್ಘಾಟನೆ.

ಕುಶಾಲನಗರ, ಸೆ. 23: ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಇದರ ಕುಶಾಲನಗರ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಸಮಾವೇಶವು ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನೆರವೇರಿಸಿ ನಂತರ ಮಾತನಾಡುತ್ತಾ ಪ್ರಜಾಪ್ರಭುತ್ವ ಮೌಲ್ಯಗಳು, ಸಿದ್ಧಾಂತಗಳು ಅದರ ಆದರ್ಶಗಳು ಉತ್ತಮವಾಗಿ ಭ್ರಷ್ಟಾಚಾರರಹಿತವಾಗಿ ಸಾಗಲು ಶಿಕ್ಷಣ ಹಂತದಲ್ಲೇ ಭ್ರಷ್ಟಾಚಾರ ನಿರ್ಮೂಲನೆ ಅರಿವು ಬಹು ಮುಖ್ಯ ವಾಗಿರುತ್ತದೆ, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬದುಕಿನಲ್ಲಿ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ದೇಶ,ರಾಜ್ಯ, ಜಿಲ್ಲೆ, ಸೇರಿದಂತೆ ತಾಲ್ಲೂಕುಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲಾ ಹಂತಗಳಲ್ಲಿ ಪಣ ತೊಡಬೇಕು,ಅದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ, ಸೇವೆಯು ಸಮರ್ಪಕವಾಗಿ ದೊರೆಯುವುದು ಇಂತಹ ಘಟಕಗಳ ಆರಂಭದಿಂದ ಭ್ರಷ್ಟಾಚಾರ ಕೊನೆಗೊಳ್ಳುವ ಮೂಲಕ ಅಧಿಕಾರಿ ವರ್ಗದವರು ಸಮಾನತೆಯ ಆಧಾರದ ಮೇಲೆ ಸೇವೆ ಸಲಿಸುವಂತಾಲಿ ಎಂದು ತಿಳಿಸಿದರು.
ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಜಿಲ್ಲಾ ಲೋಕಾಯುಕ್ತ ಪೋಲಿಸ್ ಉಪಾಧಿಕ್ಷಕರಾದ ದಿನಕರ ಶೆಟ್ಟಿ ಮಾತಾನಾಡುತ್ತಾ ಅವರು ಭ್ರಷ್ಟಾಚಾರ ಬಹಳ ಹಿಂದಿನಿಂದಲೂ ನಡೆದು ಕೊಂಡು ಬಂದಿದೆ ಅದರ ನಿರ್ಮೂಲನೆಗೆ ಪ್ರತಿಯೊಬ್ಬ ನಾಗರಿಕರು ಪ್ರಯತ್ನ ಪಡಬೇಕು, ಸಾರ್ವಜನಿಕರ ಮನಸ್ಸಿನಿಂದ ಅಪರಾಧ ಮತ್ತು ಅಪರಾಧಿಗಳಿಂದ ಮುಕ್ತ ಸಮಾಜ ನಿರ್ಮಾಣಕ್ಕೆ ಭ್ರಷ್ಟಾಚಾರವನ್ನು ತೊಡೆದುಹಾಕಬೇಕು, ಪ್ರತಿಯೊಬ್ಬ ನಾಗರಿಕಗೆ ಅವರಿಗಿರುವ ಅಧಿಕಾರಗಳ ಬಗ್ಗೆ ಜಾಗ್ರತೆ ಇರಬೇಕು, ಸರಕಾರಿ ಯೋಜನೆಗಳು ಸಾರ್ವಜನಿಕರಿಗೆ ಸಮಗ್ರವಾಗಿ ಒದಗಿಸುವ ಎಲ್ಲಾ ಅಂಶಗಳನ್ನು ತಿಳಿದುಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಬೇಕು, ಇದನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿ ವರ್ಗದವ ವಿರೋಧ ಕ್ರಮ ಕೈಗೊಳ್ಳಲು ಇಂತಹ ಘಟಕಗಳ ಮೂಲಕ ಸಾಧ್ಯವಾಗುವುದು ಎಂಬಂತೆ ಭ್ರಷ್ಟಾಚಾರದ ವಿರೋಧ ಕೈಗೊಳ್ಳಲು ವಿಷಯಗಳ ಬಗ್ಗೆ, ಲೋಕಾಯುಕ್ತರ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುವ ಸವಿಸ್ತಾರವಾದ ವಿಚಾರಗಳನ್ನು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲ್ಲೂಕು ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಕುಶಾಲನಗರ ತಾಲ್ಲೂಕು ಘಟಕ ಅಧ್ಯಕ್ಷ ಗುರುಪಾದ ಸ್ವಾಮಿ ಆರಾಧ್ಯ ವಹಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಎಲ್. ಲೋಕೇಶ್ ಕುಮಾರ್ ಸಮಿತಿಯ ಪ್ರಸ್ತಾವಿಕ ನುಡಿ, ಸಮಿತಿ ಕಾರ್ಯಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿಯ ರಾಜ್ಯಾಧ್ಯಕ್ಷ ಎಸ್ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ. ದಯಾನಂದ, ರಾಜ್ಯ ಉಪಾಧ್ಯಕ್ಷ ,ನಿವೃತ್ತ ಪೋಲಿಸ್ ಅಧೀಕ್ಷಕ ಚೊಕ್ಕಾಡಿ ಅಪ್ಪಯ್ಯ, ಮೈಸೂರು ಜಿಲ್ಲಾ ವಿಭಾಗೀಯ ಅಧ್ಯಕ್ಷ ಎಂ.ಆರ್. ಶಿವಕುಮಾರ್, ಕೊಡಗು ಜಿಲ್ಲಾಧ್ಯಕ್ಷ ಎಂ.ಎಸ್. ಮಹೇಶ್, ಪ್ರಧಾನ ಕಾರ್ಯದರ್ಶಿ ಪಿ. ಎಸ್. ಜನಾರ್ಧನ್ , ಸೇರಿದಂತೆ ಕುಶಾಲನಗರ ತಾಲ್ಲೂಕು ನೂತನ ಅಧ್ಯಕ್ಷ ಗುರುಪಾದ ಸ್ವಾಮಿ ಆರಾಧ್ಯ, ಕಾರ್ಯಧ್ಯಕ್ಷ ತಮ್ಮಯ್ಯ ಉಪಾಧ್ಯಕ್ಷ ಕೆ.ಬಿ.ಶ್ರೀನಿವಾಸ್, ಎಂ.ವಿ. ಶಿವಣ್ಣ, ಕೆ. ಜಿ ರಾಜಶೇಖರ್, ಕಾರ್ಯದರ್ಶಿ ಹರೀಶ್ ಉಪ್ಪೂರು, ಎಸ್. ಎಸ್ ವೆಂಕಟೇಶ್, ಖಜಾಂಚಿ ಶಿವಾನಂದ, ಸಂಘಟನಾ ಕಾರ್ಯದರ್ಶಿ ಚಂದ್ರು, ಮೀನಾಕ್ಷಿ, ಜಲಜಾಕ್ಷಿ,ಶ್ರೀನಿವಾಸ್, ಸಾಂಸ್ಕೃತಿಕ ಕಾರ್ಯದರ್ಶಿ ಪುಟ್ಟಮ್ಮ ಜಂಟಿ ಕಾರ್ಯದರ್ಶಿ ಹೆಚ್.ಎನ್. ಜೋಯಪ್ಪ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!