ಕಾಮಗಾರಿ

ರೂ 35 ಲಕ್ಷ ವೆಚ್ಚದಲ್ಲಿ ಹೆಬ್ಬಾಲೆ ಪದವಿಪೂರ್ವ ಕಾಲೇಜು ಮೇಲ್ಚಾವಣಿ ದುರಸ್ತಿ ಕಾರ್ಯ

ಕೂಡಿಗೆ, ಜು. 16: ಹೆಬ್ಬಾಲೆಯಲ್ಲಿರುವ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಾಲೇಜು ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ಶಿಥಿಲಗೊಂಡಿರುವ ಮೇಲ್ಚಾವಣಿಯ ಸಂಪೂರ್ಣ ದುರಸ್ತಿಯ ಕಾಮಗಾರಿಯನ್ನು ಉದ್ಯಮಿಗಳು, ಕಾಂಗ್ರೆಸ್ ಮುಖಂಡ, ಕೊಡುಗೈ ದಾನಿಗಳಾದ ನಾಪಂಡ ಮುತ್ತಪ್ಪ, ಹಾಗೂ ನಾಪಂಡ ಮುದ್ದಪ್ಪ ರವರ ಸಹಕಾರದೊಂದಿಗೆ ರೂ. 35. ಲಕ್ಷ ವೆಚ್ಚದಲ್ಲಿ ಕಾಲೇಜಿನ ಕಾಮಗಾರಿಯು ಭರದಿಂದ ಸಾಗುತ್ತಿದೆ.
ಕಾಲೇಜಿನ ನೂತನ ಮೇಲ್ಚಾವಣಿ ಅಳವಡಿಕೆ, ತಳ ಭಾಗದ ಸಂಪೂರ್ಣ ಕಾಂಕ್ರೀಟಿರಣ ದುರಸ್ತಿ ಕಾಮಗಾರಿ, ಸೇರಿದಂತೆ ಕೊಠಡಿಗಳ ದುರಸ್ತಿ, ಹಾಗೂ ವಿವಿಧ ಭಾಗ ಕಾಮಗಾರಿಯು ನಾಪಂಡ ಮುತ್ತಪ್ಪ, ಹಾಗೂ ನಾಪಂಡ ಮುದ್ದಪ್ಪರವರ ಮಾರ್ಗಸೂಚಿಯಂತೆ ರೂ. 35. ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಕಾಮಗಾರಿಯ ವೀಕ್ಷಣೆಯನ್ನು ಸಂಸ್ಥೆಯ ಕಾರ್ಯದರ್ಶಿ ರಾಜಶೇಖರ್, ಉದ್ಯಮಿಗಳಾದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ, ಸಂಸ್ಥೆಯ ನಿರ್ದೇಶಕ ಮಾಜಿ ಸೈನಿಕ ಪುಟ್ಟೇಗೌಡ , ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!