ಧಾರ್ಮಿಕ

ಕೂಡಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ಕೂಡಿಗೆ ಡೈರಿಯಲ್ಲಿ ಗೌರಿ ಗಣೇಶೋತ್ಸವ

ಕುಶಾಲನಗರ, ಆ 31:
ಕೂಡಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ಕೂಡಿಗೆ ಡೈರಿಯಲ್ಲಿ ಗೌರಿ ಗಣೇಶೋತ್ಸವ ಆಚರಣೆ ಮಾಡಲಾಯಿತು.
ಕುಶಾಲನಗರದ ಲಕ್ಷ್ಮಿ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಬುಧವಾರ ಬೆಳಿಗ್ಗೆಯಿಂದಲೇ ವಿವಿಧ ಪೂಜೆ ಹಾಗೂ ಹೋಮ ಹವನಗಳನ್ನು ಮಾಡಲಾಯ್ತು .ಹಾಗೂ ಪ್ರತಿ ವರ್ಷವೂ ಕೂಡಿಗೆ ಡೇರಿಯಲ್ಲಿನ ಗಣಪತಿ ವಿಸರ್ಜನೆಯ ದಿನ ಬಂದಂತಹ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವೂ ನಡೆಯುತ್ತದೆ ಅದೇ ರೀತಿ ಈ ವರ್ಷವೂ ಬಹಳ ಸಂಭ್ರಮದಿಂದ ಕಾರ್ಯಕ್ರಮ ನಡೆಯಲಿದೆ .ಇದೇ ಸಂದರ್ಭದಲ್ಲಿ ಮಾತನಾಡಿದ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕರಾದ ಕೆ ಕೆ ಹೇಮಂತ್ ಕುಮಾರ್, ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿಬೆಳೆದ ಗಣೇಶ ಹಬ್ಬವು ಇದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದೆ ಈ ಗಣೇಶ ಹಬ್ಬವನ್ನು ಜನರೂ ಅಷ್ಟೇ ತಿಲಕರ ಕರೆಗೆ ಜಾತಿಮತ ಭೇದವಿಲ್ಲದೆ ಬಹುಬೇಗನೆ ಸ್ಪಂದಿಸಿದರು ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಸುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನು ಮುಟ್ಟಿಸಿತ್ತು ಎಂದು ಇದೇ ಸಂದರ್ಭ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೂಡಿಗೆ ಹಾಲಿನ ಡೈರಿಯ ಮ್ಯಾನೇಜರ್ ನಂದೀಶ್, ಕೂಡಿಗೆ ಡೈರಿಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!