ಕುಶಾಲನಗರ, ಆ 27:
ವಿದ್ಯಾರ್ಥಿಗಳು ನಿರಂತರ ಕಲಿಕೆಯತ್ತ ಆಸಕ್ತಿ ಹೊಂದಬೇಕಿದೆ. ಹೆಚ್ಚು ವಿಚಾರವಂತರಾಗುವ ಕುತೂಹಲ ಬೆಳೆಸಿಕೊಳ್ಳಬೇಕಿದೆ ಎಂದು
ಪುತ್ತೂರು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ್ ಚಂದ್ರಗಿರಿ ಕರೆ ನೀಡಿದರು.
ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳುವ ಮೂಲಕ ಜ್ಞಾನದ ದಿಗಂತ ವಿಸ್ತರಿಸಿಕೊಳ್ಳಬೇಕು ಎಂದರು.
ಕಳೆದ ಮೂವತ್ತು ವರ್ಷಗಳ ವಿದ್ಯಾರ್ಥಿ ಜೀವನ ಮತ್ತು ಸವಾಲುಗಳನ್ನು ನಾನು ಕಂಡಿದ್ದೇನೆ.ಆದರೆ ಈಗ ಹೊಸ ತಲೆಮಾರುಗಳು ಎದುರಿಸುತ್ತಿರುವ ಸವಾಲುಗಳು ಮಾತ್ರ ಭಿನ್ನ ಸ್ಪರ್ಧಾತ್ಮಕವಾಗಿವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಲಾ ವಿದ್ಯಾರ್ಥಿ ಗಳಿಗೆ ವಿಜ್ಞಾನ ಕಲಿಯಲು ಹಾಗೂ ವಿಜ್ಞಾನ ವಿದ್ಯಾರ್ಥಿಗಳು ಕೂಡ ಕಲಾ ಕಲಿಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಕಲೆಯು ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪೂರಕವಾಗಿರುವುದರಿಂದ ವಿದ್ಯಾರ್ಥಿಗಳು ಕಲೆಯೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿರಬೇಕು. ತಂತ್ರಜ್ಞಾನದ ಒಳ್ಳೆಯ ಅಂಶಗಳನ್ನು ಮಾತ್ರ ಬಳಸಿಕೊಂಡು ಆ ಮೂಲಕ ಉದ್ಯೋಗದ ವಿವಿಧ ರಂಗಗಳ ಕುರಿತ ಜ್ಞಾನವನ್ನು ಪಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಹೋದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ನಾವು ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ.ಬಿ.ಡಿ.ಹರ್ಷ ಕಾಲೇಜು ವರದಿ ವಾಚನ ಮಾಡಿದರು.
ಪ್ರಾಂಶುಪಾಲ ಎಂ.ಬಿ.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವೈಶಾಖ್,ವಿದ್ಯಾರ್ಥಿ ಕ್ಷೇಮಾಪಾಲನ ಅಧಿಕಾರಿ ಪಿ.ರಮೇಶ್ಚಂದ್ರ,ಸಾಂಸ್ಕೃತಿಕ ಸಮಿತಿ ಸಂಚಾಲಕಿ ಎಂ.ಎಸ್.ರೂಪ,ಕ್ರೀಡಾ ಸಮಿತಿ ಸಂಚಾಲಕ ಟಿ.ಎಂ.ಸುಧಾಕರ್,ಎನ್ಎಸ್ಎಸ್ ಅಧಿಕಾರಿಗಳಾದ ಡಾ.ಎಸ್.ಸುನೀಲ್ ಕುಮಾರ್,
ಮಧುಶ್ರೀ,ರೋವರ್ ಘಟಕದ ಸಂಚಾಲಕ ಡಾ.ಕೆ.ಆರ್.ಸುರೇಶ್ ಕುಮಾರ್,ಅಧೀಕ್ಷಕ ಕೆ.ಪಿ.ಮೋಹನ್ ಕುಮಾರ್ ,ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಅವಿಲೇಶ್,ಕಾರ್ಯದರ್ಶಿ ಬಿ.ಎಸ್.ಪ್ರತಾಪ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನರಂಜಿಸಿದವು.
Back to top button
error: Content is protected !!