ಕುಶಾಲನಗರ, ಆ 27: ಸಮಾಜದಲ್ಲಿನ ಮೌಢ್ಯ,ಅಂಧಕಾರ ಹಾಗೂ ಅಸ್ಪೃಶ್ಯತಾ ನಿರ್ವಾರಣೆಗಾಗಿ ಹೋರಾಟ ನಡೆಸಿದ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು ಎಂದು ಜಿಲ್ಲಾ ಶ್ರೀನಾರಾಯಣ ಧರ್ಮಪರಿಪಾಲನ ಸಮಿತಿ ಅಧ್ಯಕ್ಷ ವಿ.ಕೆ.ಲೋಕೇಶ್ ಹೇಳಿದರು.
ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘದ ವತಿಯಿಂದ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ನಾರಾಯಣ ಗುರು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರುಗಳು ಹೇಳಿದಂತೆ ನಮಗೆ ಬೇಕಾಗಿರುವುದು ದೇವಸ್ಥಾನವಲ್ಲ ನಮಗೆ ಬೇಕಿರುವುದು ಶಾಲೆ ,ಶಿಕ್ಷಣ ಎಂಬುದನ್ನು ಅರಿವುಯಬೇಕು.ಸಂಘಟನೆಯಾಗಿ ಶಕ್ತರಾಗಬೇಕು ಎಂದು ಹೇಳಿದರು. ಸಮುದಾಯದ ಬಾಂಧವರು ಮದ್ಯ ಕುಡಿಬೇಡಿ,ತಯಾರಿಸಬೇಡಿ,ಮಾರಾಟ ಮಾಡಬೇಡಿ.ದುಶ್ಚಟದಿಂದ ದೂರ ಇದ್ದರೆ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ಹೇಳಿದರು.ಪ್ರತಿಯೊಬ್ಬರು ಶಿಕ್ಷಣ ಪಡೆದು ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು.ಆರ್ಥಿಕವಾಗಿ ಶಕ್ತಿವಂತರಾಗ ಮಾಡಬೇಕು.ಅಡಂಬರ,ವೈಭವದ ಮದುವೆಗಳಿಗೆ ಕಡಿವಾಣ ಹಾಕಿ ಸರಳ ವಿವಾಹಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಬಾಳೆಲೆ ವಿಜಯಲಕ್ಷ್ಮಿ ಪಿಯು ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಮಾತನಾಡಿ, ಸ್ವಾಮಿ ವಿವೇಕಾನಂದರು ಕೇರಳಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿ ನಡೆಯುತ್ತಿದ್ದ ಅಮಾನುಷ್ಯ ಕೃತ್ಯಗಳನ್ನು ಕಂಡು ಕೇರಳ ಒಂದು ಹುಚ್ಚ ಆಸ್ಪತ್ರೆ ಎಂದಿದ್ದರು.ಜಾತಿಪದ್ಧತಿ,ಮೌಢ್ಯತೆ ವಿರುದ್ಧ ನಾರಾಯಣ ಗುರುಗಳು ಏಕಾಂಗಿಯಾಗಿ ಹೋರಾಟ ಮಾಡಿ ದೊಡ್ಡಕ್ರಾಂತಿಯನ್ನು ಮಾಡಿದರು ಎಂದು ಬಣ್ಣಿಸಿದರು.
ನಿವೃತ್ತ ಪ್ರಾಂಶುಪಾಲ ಎಚ್.ವಿ.ಬೆಳ್ಳಿಯಪ್ಪ ಮಾತನಾಡಿ,ಶ್ರೀನಾರಯಣಗುರು,ಮಹಾತ್ಮ ಅಯ್ಯನ್ ಕಾಳಿ ಅವರು ಜನರಲ್ಲಿ ಜಾಗೃತಿ ಮೂಡಿಸಿ ಸಮಾನತೆ ಹಾದಿಗೆ ತೆರಲು ಪ್ರಯತ್ನ ಮಾಡುತ್ತಿದ್ದರು. ಇಂತಹ ನಾಯಕರು ಹುಟ್ಟಿನಿಂದ ಇದೀಗ ಸಮಾಜದಲ್ಲಿ ಸಮಾನತೆ, ಏಕತೆ ಹಾಗೂ ಸಹೋದರತ್ವ ಕಾಣುತ್ತಿದ್ದೇವೆ ಎಂದರು.
ಎಸ್ಸಿ, ಎಸ್ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ವಹಿಸಿದ್ದರು. ಈ ಸಂದರ್ಭ ಮಹಾಬೋಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್,ಡಾ.ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಎಸ್.ಜೆ.ಸತೀಶ್,ದಸಂಸದ ಜಿಲ್ಲಾ ಸಂಯೋಜಕ ಜೆ.ಆರ್.ಪಾಲಾಕ್ಷ,ಜಿಲ್ಲಾ ಸಂಚಾಲಕ ಕೆ.ಬಿ.ರಾಜು,ಜಿಲ್ಲಾ ಸಂಚಾಲಕಿ ಗಾಯಿತ್ರಿ ನರಸಿಂಹ,ಮುಖಂಡರಾದ ಎಂ.ಎಸ್.ವಿರೇಂದ್ರ,ಪರಶುರಾಮ, ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ,ಆದಿದ್ರಾವಿಡ ಸಮಾಜದ ಎಚ್.ಎಂ.ಸೋಮಪ್ಪ, ಎಸ್ಸಿ, ಎಸ್ಟಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಬಿ.ಸಿ.ರಾಜು,ಖಜಾಂಚಿ ನಿಂಗರಾಜು,ನಿರ್ದೇಶಕ ರಾಮಚಂದ್ರ,ಎಚ್.ಆರ್.ನಾಗೇಶ್,ಬೇಲಯ್ಯ ಇತರರು ಇದ್ದರು.