ಸಭೆ

ಜ.25 ರಂದು ಕುಶಾಲನಗರದಲ್ಲಿ ಬೃಹತ್ ಶೋಭಾ ಯಾತ್ರೆ: ಹಿಂದೂಪರ ಸಮಾಜ, ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ

ಕುಶಾಲನಗರ, ಜ 17: ತಾ.25 ರಂದು ಕುಶಾಲನಗರದಲ್ಲಿ ಆಯೋಜಿಸುತ್ತಿರುವ ಹಿಂದೂ ಸಂಗಮ ಬೃಹತ್ ಶೋಭಾ ಯಾತ್ರೆ ಕಾರ್ಯಕ್ರಮದ ಸಂಬಂಧವಾಗಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಪೂರ್ವ ಭಾವಿ ಸಭೆ ವಾಸವಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಹಿಂದೂ ಮುಖಂಡ ಜಿ.ಎಲ್.ನಾಗರಾಜು ಸಭೆಯಲ್ಲಿ ಪಾಲ್ಗೊಂಡು ಶೋಭಾ ಯಾತ್ರೆಯ ಕುರಿತು ಮಾಹಿತಿ ನೀಡಿದರು.
ಕಳೆದ 40 ವರ್ಷಗಳ ಹಿಂದೆ ಕುಶಾಲನಗರದಲ್ಲಿ ಬೃಹತ್ ಶೋಭಾ ಯಾತ್ರೆ ಹಿಂದೂ ಸಂಗಮ ನಡೆದಿತ್ತು.
ಅಂದು ಸಾಮಾಜಿಕ ಜಾಲತಾಣಗಳು ಇಲ್ಲದ ಕಾಲ. ಹಿಂದೂ ಕಾರ್ಯಕರ್ತರು ಮನೆ ಮನೆಗೆ ಖುದ್ದು ತೆರಳಿ ಸಂಘಟನೆ ಮಾಡುವ ಮೂಲಕ ಹೆಚ್ಚಿನ ಹಿಂದೂ ಭಕ್ತ ಜನರ ಸಮಾಗವಾಗಿತ್ತು.
ಆದರೆ ಇಂದು ದುರದೃಷ್ಟವಶಾತ್, ಸಾಮಾಜಿಕ ಜಾಲತಾಣಗಳ ಬಳಕೆ ಮಿತಿ ಮೀರಿದಂತೆ ಹಿಂದೂಗಳ ಸಾಮಾಜಿಕ ಕಟ್ಟು ಪಾಡುಗಳು ಅಧಃಪತನದತ್ತ ಸಾಗುತ್ತಿವೆ. ಅವಿಭಕ್ತ ಕುಟುಂಬ ವ್ಯವಸ್ಥೆ ನಾಶವಾಗಿದ್ದು ಹಿಂದೂ ಹೆಣ್ಣುಮಕ್ಕಳು ಸಂಸ್ಕಾರ ಹೀನರಾಗುವುದನ್ನು ತಡೆಯಬೇಕಿದೆ.
ಈ ನಿಟ್ಟಿನಲ್ಲಿ ತಾ.25 ರಂದು ನಡೆಯುವ ಶೋಭಾ ಯಾತ್ರೆ ಯಶಸ್ವಿಯಾಗಿ ನಡೆಯಲು ಪ್ರತೀ ಹಿಂದೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಒಟ್ಟಾರೆ ಸುವ್ಯವಸ್ಥೆಗೆ ಹಾಗೂ ಯಶಸ್ವಿಗೆ ಬೇಕಾದ ಅಗತ್ಯ ಸಿದ್ದತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಹಿಂದೂ ಸಂಘಟಕರಾದ ಬಿ.ಅಮೃತರಾಜು ಮಾತನಾಡಿ, ಶೋಭಾ ಯಾತ್ರೆ ತಾವರೆಕೆರೆ ಬಳಿಯ ಮಹಾತ್ಮಗಾಂಧಿ ಪದವಿ ಕಾಲೇಜಿನಿಂದ ಹೊರಟು ಮುಖ್ಯರಸ್ತೆಯ ಮೂಲಕ, ಮಾರಮ್ಮನ ದೇವಾಲಯ, ಐಬಿ ರಸ್ತೆಗಾಗಿ ಗಣಪತಿ ದೇವಾಲಯ ವೃತ್ತವನ್ನು ಹಾದು ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಗಮ ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಚೇಂಬರ್ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ತಾಲ್ಲೂಕು ಅಧ್ಯಕ್ಷ ಹೆಚ್.ಎಂ.ಮಧುಸೂದನ್, ಕೊಡವ ಸಮಾಜದ ವಾಂಚೀರ ಮನು ನಂಜುಂಡ, ಮಾಜಿ ಅಧ್ಯಕ್ಷ ಮೊಣ್ಣಪ್ಪ, ವೀರಶೈವ ಸಮಾಜದ ಮುಖಂಡ ಎಂ.ಎಸ್.ಶಿವಾನಂದ, ದೇವಾಂಗ ಸಮಾಜದ ಅಧ್ಯಕ್ಷ ಡಿ.ವಿ.ರಾಜೇಶ್, ಕುಡಾ ಮಾಜಿ ಅಧ್ಯಕ್ಷ ಎಂ.ಎಂ.ಚರಣ್,
ಕೇರಳ ಸಮಾಜದ ಕೆ.ವರದ, ಅನುಗ್ರಹ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಲಿಂಗಮೂರ್ತಿ, ರಾಜಸ್ಥಾನ ಸಮಾಜದ ಅಧ್ಯಕ್ಷ ಎಂ.ಕೆ.ಶರ್ಮಾ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ಎಸ್.ರಾಜಶೇಖರ್, ಪದ್ಮಪುರುಷೋತ್ತಮ್, ಪದ್ಮಮಹೇಶ್, ಕಾಂತಾಮಣಿ,
ಪುರಸಭೆ ಮಾಜಿ ಸದಸ್ಯ ಎಂ.ವಿ.ನಾರಾಯಣ,
ಪ್ರಮುಖರಾದ ರವೀಂದ್ರ ರೈ, ಹೆಚ್.ಎನ್.ರಾಮಚಂದ್ರ, ಎಂ.ಡಿ.ರಂಗಸ್ವಾಮಿ, ಲತಾ ರಮೇಶ್, ಮಧುಸೂದನ್, ಜನಾರ್ಧನ್, ಹೇರೂರು ಚಂದ್ರು, ಎಂ.ಡಿ. ಕೃಷ್ಣಪ್ಪ, ಕೆ.ಸಿ.ನಂಜುಂಡಸ್ವಾಮಿ, ನವನೀತ್ ಪೊನ್ನೇಟಿ ಮೊದಲಾದವರಿದ್ದರು.
ಶೋಭಾಯಾತ್ರೆಯ ಬಳಿಕ ಸಂಜೆ 3.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಧ್ಯಕ್ಷತೆ ವಹಿಸಿದ್ದು, ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ ರವೀಂದ್ರ ಪುತ್ತೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿ ಗಳಾಗಿ ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಕುಂಡಾರಿ, ಕುಶಾಲನಗರದ ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್, ಹಿಂದೂ ಸಂಗಮ ಸಂಯೋಜಕ ಜಿ.ಎಲ್.ನಾಗರಾಜು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹಿಂದೂ ಸಂಗಮ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!