ಸಭೆ

ಹನುಮ ಜಯಂತಿ ಪೂರ್ವಭಾವಿ ಸಭೆ

ಕುಶಾಲನಗರ, ಅ. 20: ಕೂಡಿಗೆ- ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ
ಹನುಮ ಜಯಂತಿ ಕಾರ್ಯಕ್ರಮಕ್ಕೆ ಕೂಡಿಗೆ- ಕೂಡುಮಂಗಳೂರು ಗ್ರಾಮ ಪಂಚಾಯತಿ ಭಾಗದ‌ ಹನುಮ ಸೇನಾ ಸೇವಾ ಸಮಿತಿಯ ನಾಲ್ಕುನೇ ವರ್ಷದ ಹನುಮ ಜಯಂತೋತ್ಸವ ಪೂರ್ವಭಾವಿ ಸಭೆಯು ಕೂಡಿಗೆ ಗಣಪತಿ ಫೆಂಡಾಲ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಕೆ.ಎಸ್ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೂಡಿಗೆ, ಕೂಡುಮಂಗಳೂರು ಗ್ರಾಮಗಳ ವಿವಿಧ ಘಟಕಗಳ ಪದಾಧಿಕಾರಿಗಳು,ಯವಕರ ವೃಂದ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭ ಮುಂದಿನ ಡಿಸೆಂಬರ್ 2 .ರಂದು ಹನುಮ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು. ಮತ್ತು ಕಳೆದ ಬಾರಿಗಿಂತ ಈ ವರ್ಷ ವಿಶೇಷವಾಗಿ, ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ನಡೆಸಲು ಹಾಜರಿದ್ದ ಸದಸ್ಯರುಗಳ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ಈ ಸಂದರ್ಭ ಹನುಮ ಸೇನಾ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ರೀಜೂ, ಕಾರ್ಯದರ್ಶಿ ರವಿ, ಖಜಾಂಚಿ ಧರ್ಮ, ಉದ್ಯಮಿ ಕಿಶೋರ್ ಕುಮಾರ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅರುಣ್ ರಾವ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್. ಆರ್. ಸುನಿಲ್ ರಾವ್, ಪ್ರಮುಖರಾದ ಗುರುಪ್ರಸಾದ್,ತಿಲಕ್,ವೀಜೂ,ಮಧು, ರತೀಶ್,ಪವನ್, ರಕ್ಷಿತ್, ಗೌರವಾಧ್ಯಕ್ಷರಾದ ಕೇಶವರೈ, ಒಡಿಯಂಡ ಸುಬ್ಬಯ್ಯ, ಸೇರಿದಂತೆ ಕೂಡಿಗೆ- ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಸಮಿತಿಯ ನೂರಾರು ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!