ಸಭೆ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ: ಜಿಲೆಯಲ್ಲಿ ಶೇಕಡ 95ರಷ್ಟು ಗಣತಿ ನಮೂನೆ ಅರ್ಜಿ ವಿತರಣೆ

ಕುಶಾಲನಗರ, ಜು 09: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಜಿಲೆಯಲ್ಲಿ ಶೇಕಡ 95ರಷ್ಟು ಗಣತಿ ನಮೂನೆ ಅರ್ಜಿ ವಿತರಣೆ ನಡೆದಿದೆ ಎಂದು ಕೊಡಗು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾ ರಿಟರ್ನಿಂಗ್ ಅಧಿಕಾರಿಯೂ ಆಗಿರುವ ನಿತಿನ್ ಚಕ್ಕಿ ಅವರು ತಿಳಿಸಿದ್ದಾರೆ.
ಕುಶಾಲನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಮತ್ತು ಚುನಾವಣಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ವ್ಯಾಪ್ತಿಯಲ್ಲಿ ನೂರಕ್ಕೂ ಅಧಿಕ ಬಿ ಎಲ್ ಓ ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಬಹುತೇಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮನೆಮನೆಗೆ ತೆರಳಿ ಗಣತಿ ನಮೂನೆ ಅರ್ಜಿ ವಿತರಿಸಿರುವುದಾಗಿ ತಿಳಿಸಿದರು.
ಈ ತಿಂಗಳ 24ರ ಒಳಗಡೆ ಗಣತಿ ನಮೂನೆಯಲ್ಲಿ ಸಮರ್ಪಕ ಮಾಹಿತಿ ನೀಡುವುದರೊಂದಿಗೆ ಸಹಿ ಹಾಕಿ ಅರ್ಜಿಯನ್ನು ಹಿಂತಿರುಗಿಸಬೇಕು.
ಈ ಮಾಹಿತಿಗಳನ್ನು ಡಿಜಿಟಲೈಸೇಶನ್ ಮಾಡುವ ಪ್ರಕ್ರಿಯೆ ನಡೆಯಲಿದೆ. ಯಾವುದೇ ನ್ಯೂನತೆ ಇದ್ದಲ್ಲಿ ಬಿ ಎಲ್ ಒ ಗಳು ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು ಮನೆ ಮನೆಗೆ ತೆರಳಲು ಅನಾನುಕೂಲವಾಗುತ್ತಿದೆ.
ಆದರೂ ಸಂಬಂಧಿಸಿದ ಬಿ ಎಲ್ ಒ ಗಳು ತಮ್ಮ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿತ್ಯ ಆನ್ಲೈನ್ ಮೂಲಕ ಬಿ ಎಲ್ ಓ ಗಳಿಗೆ ತರಬೇತಿ ನೀಡಲಾಗುತ್ತಿದೆ. ಅವರ ಕಾರ್ಯವೈಖರಿ ಬಗ್ಗೆ ಗಮನಿಸಲು ಬಿಎಲ್ಓ ಮೇಲ್ವಿಚಾರಕರು ನಿಯೋಜನೆಗೊಂಡಿದ್ದಾರೆ ಎಂದರು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 23 ಮಂದಿ ಬಿ ಎಲ್ ಓ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಪ್ರತಿಯೊಬ್ಬರೂ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡುವ ಸಂದರ್ಭ ಲೋಪದೋಷ ಬರೆದಂತೆ ಎಚ್ಚರಿಕೆ ವಹಿಸಬೇಕು ಎಂದ ಅವರು ಗಣತಿ ನಮೂನೆ ಅರ್ಜಿ ಭರ್ತಿ ಮಾಡಿ ಬಿ ಎಲ್ ಹೊಗೆ ಹಸ್ತಾಂತರಿಸುವ ಕಾರ್ಯ ಪ್ರತಿಯೊಬ್ಬ ಮತದಾರನದಾಗಿದೆ.
ಸರ್ವ ಪಕ್ಷಗಳ ಪ್ರತಿನಿಧಿಗಳು ಏಜೆಂಟರು ಈ ಕಾರ್ಯದಲ್ಲಿ ಕೈಜೋಡಿಸುವಂತೆ ಅವರು ಕೋರಿದರು. ಯಾವುದೇ ರೀತಿಯ ಸಾರ್ವಜನಿಕ ದೂರು ಬರೆದಂತೆ ಗಮನಹರಿಸಲು ಪಕ್ಷದ ಪ್ರತಿನಿಧಿಗಳಿಗೆ ಸಲಹೆ ನೀಡಿದರು.
2002ರ ಪಟ್ಟಿಯಲ್ಲಿ ಮಾಹಿತಿ ಪಡೆಯಲು ಸಾಧ್ಯವಾಗದಿದ್ದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಗಣತಿ ನಮೂನೆಯಲ್ಲಿ ಇರುವ ಮಾಹಿತಿ ಭರ್ತಿ ಮಾಡಿ ಸಹಿ ಹಾಕಿ ಬಿ ಎಲ್ ಓ ಗಳಿಗೆ ಕೊಡುವಂತೆ ಸಲಹೆ ನೀಡಿದರು.
ಗಣತಿ ನಮೂನೆ ಭರ್ತಿ ಮಾಡಿ ಬಿ ಎಲ್ ಓ ಗಳಿಗೆ ಕೊಟ್ಟ ಬಳಿಕವೂ ಕೂಡ ಬದಲಾವಣೆ ಮಾಡುವುದಿದ್ದಲ್ಲಿ ಜುಲೈ 29ರೊಳಗೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ತಮ್ಮ ಗಮನಕ್ಕೆ ತರುವಂತೆ ಕೋರಿದರು.
ಈ ಸಂದರ್ಭ ತಾಲೂಕು ತಹಸಿಲ್ದಾರ್ ಹಾಗೂ ಸಹಾಯಕ ಈ ಆರ್ ಓ ಕೃಷ್ಣಮೂರ್ತಿ, ತಾಲೂಕು ಚುನಾವಣಾ ಮೇಲ್ವಿಚಾರಕರು ಲೋಹಿತ್, ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಬಿ ಎಲ್ ಓ ಮೇಲ್ವಿಚಾರಕರಾದ ರಾಮು, ಸವಿತಾ, ವಿವಿಧ ಪಕ್ಷದ ಪ್ರತಿನಿಧಿಗಳಾದ ವಿ ಪಿ ಶಶಿಧರ್, ಬಿ ಬಿ ಭಾರತೀಶ್, ಗೌತಮ್ ಗೌಡ, ವಸಂತ್ ಹೆಚ್ ಟಿ, ವೆಂಕಟೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!