ಕುಶಾಲನಗರ, ಜು 09: ಕುಶಾಲನಗರ ಪುರಸಭೆ ಪ್ರಾಂಗಣದಲ್ಲಿನ 7 ಅಂಗಡಿ ಮಳಿಗೆಗಳನ್ನು ಆನ್ ಲೈನ್ ಹೊರತುಪಡಿಸಿ ಬಹಿರಂಗ ಹರಾಜಿಗೆ ಒಳಪಡಿಸುವಂತೆ ಅಂಗಡಿ ಮಳಿಗೆದಾರರಾದ ಮಹದೇವ್ ಮತ್ತು ಕಿರಣ್ ಸುದ್ದಿಗೋಷ್ಠಿ ಮೂಲಕ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಈಗಾಗಲೆ 12 ಅಂಗಡಿ ಮಳಿಗೆಗಳನ್ನು ಬಹಿರಂಗ ಹರಾಜು ನಡೆಸಲಾಗಿದೆ. ಈ ಪೈಕಿ ರಿಜಿಸ್ಟರ್ ಆಗದ 7 ಅಂಗಡಿ ಮಳಿಗೆಗಳನ್ನು ಇ- ಹರಾಜಿಗೆ ಒಳಪಡಿಸಲಾಗಿದೆ. ಇದರಿಂದ ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡು ದುಬಾರಿ ಮೊತ್ತಕ್ಕೆ ಮಳಿಗೆಗಳನ್ನು ಖರೀದಿಸಿದವರಿಗೆ ಅನ್ಯಾಯವಾಗಲಿದೆ. ಇ-ಟೆಂಡರ್ ಪ್ರಕ್ರಿಯೆ ಕೂಡ ಜಟಿಲವಾಗಿರುವ ಕಾರಣ ಉಳಿದ ಮಳಿಗೆಗಳನ್ನು ಬಹಿರಂಗ ಹರಾಜಿಗೆ ಒಳಪಡಿಸುವಂತೆ ಒತ್ತಾಯಿಸಿದರು.
Back to top button
error: Content is protected !!