ಕಾಮಗಾರಿ

ಪೂರ್ಣಗೊಳ್ಳದ ಹಾರಂಗಿ ಮುಖ್ಯ ನಾಲೆ ಕಾಮಗಾರಿ: ಭತ್ತದ ಬಿತ್ತನೆ ಕಾರ್ಯ ಹಿನ್ನಡೆ, ಆತಂಕದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು

ಕೂಡಿಗೆ, ಜು‌ .8: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಆಧುನಿಕಣದ ಮುಖೇನ ದುರಸ್ತಿ ಕಾರ್ಯಕ್ಕೆ ಈಗಾಗಲೇ ರಾಜ್ಯ ಕಾವೇರಿ ನೀರಾವರಿ ನಿಗಮದ ಮೂಲಕ 150. ಕೋಟಿ ಹಣ ಬಿಡುಗಡೆಗೊಂಡು, ನಿಗಮದ ಕ್ರಿಯಾ ಯೋಜನೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆ ಮೂಲಕ ಭೂಮಿ ಪೂಜೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೆರವೇರಿಸಿದರು.
ಕ್ರಿಯಾ ಯೋಜನೆಯ ಅನುಗುಣವಾಗಿ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆ 7. ರಿಂದ 14. ನೇ ತೂಬಿನವರೆಗೆ ಮುಖ್ಯ ನಾಲೆಯ ಎರಡೂ ಕಡೆಗಳಲ್ಲಿ ಕಾಂಕ್ರೀಟಿರಣ , ಸೇತುವೆಯ ನಿರ್ಮಾಣದ ಕಾರ್ಯ ನಡೆಯಬೇಕಾಗಿದೆ.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಐ.ಕೆ. ಪುಟ್ಟಸ್ವಾಮಿ ರವರ ಮಾರ್ಗದರ್ಶನದಲ್ಲಿ ಟೆಂಡರ್ ದಾರ ಕಾಮಗಾರಿಯನ್ನು ಆರಂಭಿಸಿದರೂ ಕಾಮಗಾರಿಯು ನಿಧಾನಗತಿಯಲ್ಲಿ ನಡೆಸುತ್ತಿರುವುದು ಕಂಡುಬರುತ್ತಿದೆ.
ಅಚ್ಚುಕಟ್ಟು ಪ್ರದೇಶ ನೂರಾರು ರೈತರು ಜುಲೈ ತಿಂಗಳ ಎರಡನೇ ವಾರದಲ್ಲಿ ಭತ್ತದ ಬಿತ್ತನೆ ಬೀಜದ ಮೂಲಕ ಸಸಿ ಮಡಿಗಳ ಸಿದ್ದತೆ ಮಾಡಿಕೊಳ್ಳಲು ನೀರಿನ ಅವಶ್ಯಕತೆ ಪ್ರಮುಖವಾಗಿರುತ್ತದೆ. ತಮ್ಮ ಜಮೀನಿನಲ್ಲಿ ಭತ್ತದ ಬಿತ್ತನೆ ಕಾರ್ಯವನ್ನು ಆರಂಭಿಸಲು ಮುಂದಾದರೂ ನೀರಿನ ಸಮಸ್ಯೆ ಕಂಡುಬರುತ್ತಿದೆ.
ಜುಲೈ ತಿಂಗಳ ಎರಡನೇ ವಾರದಲ್ಲಿ ಭತ್ತದ ಸಸಿ‌ಮಡಿಗಳನ್ನು ಸಿದ್ದತೆ ಮಾಡಿಕೊಂಡಲ್ಲಿ ಮುಂದಿನ ತಿಂಗಳುಗಳಲ್ಲಿ ನಾಟಿ ಕಾರ್ಯ ಮಾಡಲು ಅನುಕೂಲ, ಮತ್ತು ಚಳಿಗಾಲದ ಸಮಯಕ್ಕೆ ಅನುಗುಣವಾಗಿ ಬೆಳೆಯು ಉತ್ತಮವಾಗಿ ಬರುವುದರಿಂದಾಗಿ ಮೊದಲು ಸಣ್ಣ ಪ್ರಮಾಣದ ನೀರನ್ನು ನಾಲೆಯ ಮೂಲಕ ಹರಿಸುವಂತೆ ನೂರಾರು ರೈತರ ಒತ್ತಾಯವಾಗಿದೆ.
ಅಣೆಕಟ್ಟೆಯ ಮುಖ್ಯ ನಾಲೆಯ ಕಾಮಗಾರಿಯಲ್ಲಿ ಪ್ರಮುಖವಾಗಿ ಎರಡೂ ಸೇತುವೆಯ ಕಾಮಗಾರಿಯು ಕ್ರಿಯಾ ಯೋಜನೆಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದಾಗಿ , ಎರಡು ಸೇತುವೆಯ ಮೂಲಕ ಕುಶಾಲನಗರ– ಸೋಮವಾರಪೇಟೆ ಸಂಪರ್ಕದ ಮುಖ್ಯ ರಸ್ತೆ, ಮತ್ತು 10. ಉಪ ಗ್ರಾಮಗಳ ಮುಖ್ಯ ಸಂಪರ್ಕ ರಸ್ತೆಯು ಅಗಿರುವ ಹಿನ್ನೆಲೆಯಲ್ಲಿ ಹಾರಂಗಿ ಮುಖ್ಯ ನಾಲೆಯ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಪರ್ಕಕ್ಕೆ ಅನುಕೂಲ, ಮತ್ತು ಬೇಸಾಯಕ್ಕೆ ನಾಲೆಯ ಮೂಲಕ ನೀರನ್ನು ಹರಿಸುವಂತೆ ಅಚ್ಚುಕಟ್ಟು ಪ್ರದೇಶ ನೂರಾರು ರೈತರ ಅಗ್ರಹವಾಗಿದೆ.
ಕಾಮಗಾರಿಯ ಬಗ್ಗೆ ಹಾರಂಗಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಐ.ಕೆ. ಪುಟ್ಟಸ್ವಾಮಿ ರವರ ಅಭಿಪ್ರಾಯ ಬಯಸಿದಾಗ ಟೆಂಡರ್ ಪ್ರಕ್ರಿಯೆ ಅನುಗುಣವಾಗಿ ಮುಖ್ಯ ನಾಲೆಯ ಕಾಮಗಾರಿ, ಎರಡೂ ಸೇತುವೆಯ ಕಾಮಗಾರಿಯು ನಡೆಯುತ್ತಿದೆ ಗ್ರಾಮಗಳ ಸಂಪರ್ಕಕ್ಕೆ ಅನುವು ಮಾಡಲಾಗಿದೆ. ಈಗಾಗಲೇ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ನೀರಿನ ಹರಿಯುವಿಕೆ ಹೆಚ್ಚಾಗಿ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಕಾವೇರಿ ನೀರಾವರಿ ಸಲಹಾ ಸಮಿತಿಯ ಸಭೆಯ ತೀರ್ಮಾನದ ನಂತರ ಮುಖ್ಯ ನಾಲೆಯಲ್ಲಿ ಬೇಸಾಯಕ್ಕೆ ನೀರನ್ನು ಹರಿಸಲಾಗುವುದು ,ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ರೀತಿಯ ತೊಂದರೆಗಳು ಅಗದಂತೆ ಕ್ರಮ ವಹಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!