ಕುಶಾಲನಗರ, ಜು 06: : ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಗ್ರಾಹಕರಿಗೆ ಮನೆ ಬಾಗಿಲಿಗೆ ಮೊತ್ತ ಪಡೆದುಕೊಳ್ಳಲು ಅನುಕೂಲವಾಗುವಂತೆ ಡಿ.ಜಿ.ಪೇ ಅನುಷ್ಟಾನ ಮಾಡಲಾಗುತ್ತಿದೆ.
ಎಲ್ಲರು ನಗು ಮುಖದ ಸೇವೆಯನ್ನು ಪಾಲುದಾರ ಬಂಧುಗಳಿಗೆ ಕೊಡಿ ಎಂದು ಸಿಎಸ್ ಇ ವಿಭಾಗದ ಪ್ರಾದೇಶಿಕ ನಿದೇ೯ಶಕರಾದ ಜಯಂತ ಪೂಜಾರಿ ತಿಳಿಸಿದರು.
ಕುಶಾಲನಗರ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ನಡೆದ ಸೇವಾದಾರರ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಕಚೇರಿಯಲ್ಲಿ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಯೋಜನಾ ಕಚೇರಿಗಳ ಸೇವಾದಾರರು, ನಗದು ಮೇಲ್ವಿಚಾರಕರು, ನೋಡೆಲ್
ಹಣಕಾಸು ಪ್ರಬಂದಕರು, ಕ್ಷೇತ್ರ ಯೋಜನಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಡಿಜಿಪೇ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾಹಿತಿ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ವಿಠಲ್ ಸಾಲ್ಯಾನ್, ತಾಲ್ಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಯೋಜನಾಧಿಕಾರಿಗಳಾದ
ಪುರುಷೋತ್ತಮ್, ಹರೀಶ್, ಸುಪ್ರೀತ್ ಇದ್ದರು.
ಚಂದ್ರಯ್ಯ ಸ್ವಾಗತಿಸಿ, ಸತೀಶ್ ನಿರೂಪಿಸಿದರು.
ಹನುಮಂತಪ್ಪ ವಂದಿಸಿದರು.
Back to top button
error: Content is protected !!