ಕುಶಾಲನಗರ, ಜು 07: ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ರಂಗಸಮುದ್ರ ಧವಸ ಭಂಡಾರ ಸಂಘ,ಹಾಲು ಉತ್ಪಾದಕರ ಸಹಕಾರ ಸಹಕಾರ ಸಂಘ ಗುಡ್ಡೆಹೊಸುರು ಇವರ ಸಂಯುಕ್ತ ಆಶ್ರಯದಲ್ಲಿ ಅಭಿನಂದನಾ ಸಮಾರಂಭ ಎರ್ಪಡಿಸಲಾಗಿತ್ತು.
ಈ ಮೂರು ಸಂಘಗಳ ಜಾಗಗಳ ದಾಖಲೆ ಪತ್ರಗಳು ಸರಿಯಾಗಿರಲಿಲ್ಲ,
ಸಂಘಗಳ ನಿವೇಶನಗಳ ದಾಖಲೆಯನ್ನು ಈ ದಿನ ಶಾಸಕರಾದ ಡಾ|| ಮಂಥರ್ ಗೌಡ ಅವರು ಮೂರು ಸಂಘಗಳ ಅಧ್ಯಕ್ಷರಿಗೆ ವಿತರಿಸಿದರು. ನಂಜರಾಯಪಟ್ಟಣ ಸಹಕಾರ
ಸಂಘದ ಅಧ್ಯಕ್ಷ ಮುರಳಿಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭ ವೇದಿಕೆಯಲ್ಲಿ ಗ್ಯಾರಂಟಿ
ಅನುಷ್ಟಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ ಅವರು ಹಾಜರಿದ್ದು ಶಾಸಕರು ಅವರ ನಿಧಿಯಿಂದ ಈ ವಿಭಾಗದಲ್ಲಿ ನೀಡಿರಿವ ಕಾಮಗಾರಿಯ ಬಗ್ಗೆ ವಿವರಿಸಿದರು. ಅಲ್ಲದೆ
ಶಾಸಕರು ಈ ಸಂಧರ್ಭ ಮಾತನಾಡಿ ರೈತರಿಂದ ನಡೆಯುತ್ತಿರುವ ಈ ಸಂಘಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಶಾಸಕರ ನಿಧಿಯಿಂದ ರಂಗಸಮುದ್ರ ಧವಸ
ಬಂಡಾರಕ್ಕೆ,ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ತಲಾ 5 ಲಕ್ಷ ರುಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದರು.
ಈ ಸಂದರ್ಭ ಡಾ||
ಮಂಥರ್ ಗೌಡ ಮತ್ತು ವಿ.ಪಿ.ಶಶಿಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಭಾಗದಲ್ಲಿ ರಾಷ್ರ್ಟೀಯ ಹೆದ್ದಾರಿ ಬರುತ್ತಿರುವುದರಿಂದ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡದಂತೆ ಕಿವಿಮಾರು ಹೇಳಿದರು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಜಮೀನಿಗೆ ಭಾರಿ ಬೆಲೆ ಬರುವ ಸಾಧ್ಯತೆ ಇದೆ ಎಂಬುದಾಗಿ
ವಿವರಿಸಿದರು, ಅಲ್ಲದೆ ಕೃಷಿಯೇತರ ಚಟುವಟಿಕೆಗಳಿಗೆ ನೀಡದಂತೆ ರೈತರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ಧವಸ ಭಂಡಾರದ ಅಧ್ಯಕ್ಷ ಎ.ಎಂ.ಲೋಕನಾಥ್
ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್, ಮೂರು ಸಹಕಾರ ಸಂಘದ ನಿರ್ದೇಶಕ ಮತ್ತು ಉಪಾಧ್ಯಕ್ಷರಾದ ಬಿ.ಎಸ್.ಧನಪಾಲ್
ಅವರುಗಳು ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು
Back to top button
error: Content is protected !!