ರಾಜಕೀಯ

ಹಾರಂಗಿ‌ ಜಲಾಶಯಕ್ಕೆ‌ ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ‌ ವಿಸಿಟ್: ಪರಿಶೀಲನೆ

ಕುಶಾಲನಗರ, ಆ 21: ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು.
ವಿವಿಧ ಜಿಲ್ಲೆಗಳಲ್ಲಿ‌ ಉಂಟಾಗಿರುವ ಮಳೆಹಾನಿ ಪರಿಶೀಲನೆ ಸಂಬಂಧ ಹಮ್ಮಿಕೊಂಡಿರುವ ಪ್ರವಾಸ ಕಾರ್ಯಕ್ರಮದ‌ ಅಂಗವಾಗಿ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಅಣೆಕಟ್ಟೆ ಪರಿಶೀಲಿಸಿದರು.

ಹಾರಂಗಿ ಜಲಾಶಯ ಪರಿಶೀಲನೆ

ನಂತರ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ರೂ 130 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಮತ್ತು ನದಿ ಪುನಶ್ಚೇತನ ಕಾರ್ಯಕ್ರಮಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು. ಜನರ ಜೀವನಾಡಿಯಾಗಿರುವ ನದಿಗಳು ಕಲುಷಿತಗೊಳ್ಳದಂತೆ ಮತ್ತು‌ ನದಿ, ಕೆರೆಗಳು ಒತ್ತುವರಿ ತಡೆಗಟ್ಟಲು ಜನಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಅವರ ನದಿ ಹಬ್ಬ ಚಿಂತನೆ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿತ್ತು. ಇದಕ್ಕೆ‌ ಮುಂದಿನ ದಿನಗಳಲ್ಲಿ ಚಾಲನೆ‌ ನೀಡಲಾಗುವುದು ಎಂದರು.
ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮ‌ ಪೂರ್ವಜರು ನಮಗೆ ಸುಸಂಸ್ಕೃತ ಮೌಲ್ಯಗಳನ್ನು ನಾವು ತಪ್ಪದೆ ಪಾಲಿಸಬೇಕಿದೆ.‌ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಯಾವುದೇ ಪ್ರಕರಣಕ್ಕೆ ಆಸ್ಪದ‌ ನೀಡಬಾರದು ಎಂದರು.
ಇದೇ ಸಂದರ್ಭ ಹಾರಂಗಿ ಅಣೆಕಟ್ಟೆ ಸಂಪರ್ಕ‌ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೂಡುಮಂಗಳೂರು ಗ್ರಾಪಂ‌ ಉಪಾಧ್ಯಕ್ಷ ಭಾಸ್ಕರ್ ನಾಯಕ್ ನೀಡಿದ ಮನವಿ ಸ್ಪಂದಿಸಿದ ಅವರು ಕೂಡಲೆ‌ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭ ಪಿರಿಯಾಪಟ್ಟಣ ಶಾಸಕ ಮಹದೇವ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!