ಸುಂಟಿಕೊಪ್ಪ, ಜ 06: ಕೊಡಗಿನಲ್ಲಿ ಕಾಡಾನೆ ಹಾವಳಿ ಮುಗಿಯದ ಕಥೆಯಾಗಿದೆ ವರ್ಷವಿಡಿ ರೈತರು ಆನೆಗಳಿಂದ ಎದುರಿಸುತ್ತಿರುವ ಸಂಕಷ್ಟ ಹೇಳಿ ತೀರದಂತಾಗಿದೆ,ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ.
ಇತ್ತೀಚಿಗೆ ಸುಂಟಿಕೊಪ್ಪ ಭಾಗದ ಹೇರೂರು ಗ್ರಾಮದಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ ನಿನ್ನೆ ಪ್ರಗತಿಪರ ಕೃಷಿಕ ಚಂದ್ರಶೇಖರ್ ಹೇರೂರು ಇವರ ತೋಟಕ್ಕೆ ಲಗ್ಗೆ ಇಟ್ಟ ಆನೆಯು ರೋಬಸ್ಟಾ ಕಾಫಿ ಬೆಳೆಯನ್ನು ನಾಶಮಾಡಿದೆ ಸುಮಾರು 20 ಗಿಡದಲ್ಲಿದ್ದ ಕಾಫಿ ಫಸಲನ್ನು ಹಾಗೆ ಬಾಳೆಯನ್ನು ನಾಶಮಾಡಿ.
ಈ ಹಿಂದೆಯೂ ಇವರ ತೋಟಕ್ಕೆ ನುಗಿದ್ದ ಆನೆಗಳು ಸುಮಾರು 100 ಅಡಿಕೆ ಮರ ಬುಡ ಸಮೇತ ಮುರಿದಿದ್ದವು ಇದರಿಂದ ಲಕ್ಷಾಂತರ ರೂ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗಿತ್ತು ಈ ಘಟನೆ ಮಾಸುವ ಮುನ್ನವೆ ಕುಯಿಲಿಗೆ ಬಂದಿದ್ದು ಕಾಫಿ ನಾಶಮಾಡಿದೆ ಎಂದು ದುಃಖ ವ್ಯಕ್ತ ಪಡಿಸಿದ್ದಾರೆ.ರೈತರು ಬೆಳೆದ ಫಸಲಿಗೆ ಸರಿಯಾಗಿ ಬೆಲೆ ಸಿಗದೇ ನಷ್ಟ ಅನುಭವಿಸುತಿದ್ದರು ಆದರೆ ಈ ಬಾರಿ ಕಾಫಿಗೆ ಉತ್ತಮ ಬೆಲೆ ಇದೆ ಆದರೆ ಆನೆ ಎಲ್ಲವನ್ನು ನಾಶ ಮಾಡುತ್ತಿವೆ.
ಕಳೆದ ಏಪ್ರಿಲ್ ನಿಂದ ಈ ವರೆಗೆ 20 ಬಾರಿ ಆನೆ ತೋಟಕ್ಕೆ ಲಗ್ಗೆ ಇಟ್ಟು ಫಸಲು ಹಾಳುಮಾಡಿದ್ದು ಈ ಬೆಳೆ ನಾಶಕ್ಕೆ ಇನ್ನು ಪರಿಹಾರ ನಮ್ಮ ಕೈ ಸೇರಿಲ್ಲ ಈಗಿರುವಾಗ ಮತ್ತೊಮ್ಮೆ ಲಕ್ಷ ರೂಗಳಷ್ಟು ಫಸಲು ನಾಶಮಾಡಿದೆ ಇತ್ತ ಪರಿಹಾರದ ಹಣವು ವಿಳಂಬ ಆನೆ ತಡೆಯುವಲ್ಲಿಯೂ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದು .
ಈ ಕೊಡಲೇ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು ಹಾಗೆ ಆನೆ ಹಾವಳಿಯನ್ನು ತಡೆಗಟ್ಟದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿಯ ಮುಂದೆ ರೈತರನ್ನು ಒಗ್ಗೂಡಿಸಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Back to top button
error: Content is protected !!