ಸಭೆ
ಕುಶಾಲನಗರಕ್ಕೆ ತಾಲೂಕು ಮಟ್ಟದ ಕ್ರೀಡಾಂಗಣ ಕೊರತೆ: ಗುಂಡುರಾವ್ ಕ್ರೀಡಾಂಗಣ ಸಮಿತಿ ರಚನೆ


ಕುಶಾಲನಗರ, ನ 30: ಕ್ರೀಡಾ ಜಿಲ್ಲೆ ಕೊಡಗಿನ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕೊರತೆ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕೆ ಒತ್ತಾಯಿಸಿ ಮಾಜಿ ಮುಖ್ಯ ಮಂತ್ರಿ ಗುಂಡುರಾವ್ ಹೆಸರಿನಲ್ಲಿ ಕ್ರೀಡಾಂಗಣ ಸಮಿತಿ ರಚಿಸಲಾಗಿದೆ. ಕುಶಾಲನಗರದ ಗಾಯತ್ರಿ ಸಭಾಂಗಣ ಆವರಣದಲ್ಲಿ ಕ್ರೀಡಾಪಟುಗಳ ತಂಡದಿಂದ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಸೃಷ್ಠಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರೀಡೆಗಳಿಗೆ ಸೂಕ್ತ ಸ್ಥಳದಲ್ಲಿ ಮೈದಾನದ ಅಗತ್ಯವಿದೆ. ಇದಕ್ಕಾಗಿ ಸಂಬಂಧಿಸಿದವರ, ಚುನಾಯಿತ ಜನಪ್ರತಿನಿಧಿಗಳ ಗಮನ ಸೆಳೆಯಬೇಕಿದೆ. ಈ ನಿಟ್ಟಿನಲ್ಲಿ ಕ್ಲಬ್ ಒಂದರ ಸ್ಥಾಪನೆ ಅಗತ್ಯವಿದೆ. ಗುಂಡುರಾವ್ ಬಡಾವಣೆಯಲ್ಲಿ ಈಗಿರುವ ಮೈದಾನ ಸೂಕ್ತವಾಗಿದ್ದು ಅದನ್ನೇ ಅಭಿವೃದ್ಧಿಪಡಿಸಿದಲ್ಲಿ ಉತ್ತಮ ಎಂಬ ಅಭಿಪ್ರಾಯ ಸಲಹೆಗಳು ಸಭೆಯಲ್ಲಿ ವ್ಯಕ್ತಗೊಂಡವು.
ಕ್ರೀಡಾಂಗಣ ಸ್ಥಾಪನೆಗೆ ಅನುಕೂಲವಾಗುವಂತೆ ಸಮಿತಿ ರಚಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಹೋರಾಟ ಸಮಿತಿ ಗೌರವಾಧ್ಯಕ್ಷರಾಗಿ ಪವನ್ ಗಣಪತಿ, ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣ, ಉಪಾಧ್ಯಕ್ಷರುಗಳಾಗಿ ಡೈಮಂಡ್ ಮಣಿ, ಫಯಾಜ್, ಪ್ರಧಾನ ಸಂಚಾಲಕರಾಗಿ ಮಹದೇವ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಆದಂ, ಖಜಾಂಚಿಯಾಗಿ ಸಲ್ಮಾನ್, ಸಂಘಟನಾ ಕಾರ್ಯದರ್ಶಿ ಹರೀಶ್, ಸಂಚಾಲಕರಾಗಿ ಸಮದ್, ರಿಜು ಬಸಪ್ಪ, ಕೃತಿಕ್, ವಿನೋದ್, ಕಾರ್ಯದರ್ಶಿಯಾಗಿ ದೇವೇಂದ್ರ, ಸಹ ಕಾರ್ಯದರ್ಶಿಯಾಗಿ ವೇಣು, ಮಾಧ್ಯಮ ಸಲಹೆಗಾರರಾಗಿ ಪ್ರಭುದೇವ್, ಜಯಪ್ರಕಾಶ್, ಕಾನೂನು ಸಲಹೆಗಾರರಾಗಿ ಶಿವಮೂರ್ತಿ, ನಿರ್ದೇಶಕರುಗಳಾಗಿ ವೆಂಕಿ, ಚಂದು, ಚಂದ್ರಶೇಖರ್, ಖಾಜಾ, ಇಲ್ಲುಬಾಯ್, ನೂತನ್, ಉಲ್ಲಾಸ್ ಕೃಷ್ಣ, ನಂದೀಶ್, ಇರ್ಫಾನ್ ಆಯ್ಕೆಯಾದರು.