ಆರೋಗ್ಯ

ಕೂಡಿಗೆ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸಚಿವರಿಗೆ ಒತ್ತಾಯಿಸಿದ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್

ಕುಶಾಲನಗರ, ಡಿ 19 ಕೂಡಿಗೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ದಾದಿಯರನ್ನು ನೇಮಕ ಮಾಡಬೇಕು. ಹಾಗೆಯೇ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಈ ಭಾಗದ ಗ್ರಾಮೀಣ ಪ್ರದೇಶಗಳ ಬಡ ರೋಗಿಗಳಿಗೆ ಅನುಕೂಲ ಮಾಡಬೇಕೆಂದು ಕೂಡುಮಂಗಳೂರು ಹಾಗು ಕೂಡಿಗೆ ಗ್ರಾಮ ಪಂಚಾಯಿತಿ ಗಳ ಜನಪ್ರತಿನಿಧಿಗಳು ಆರೋಗ್ಯ ಸಚಿವರನ್ನು ಆಗ್ರಹಿಸಿದರು.
ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಕೂಡಿಗೆಯ ಆಸ್ಪತ್ರೆಗೆ ಭೇಟಿ ನೀಡಿದಾಗ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರನಾಯಕ್ ಮನವಿ ಸಲ್ಲಿಸಿ, ಹಾರಂಗಿ ಹಾಗೂ ಕಾವೇರಿ ನದಿಗಳ ಸಂಗಮವಾದ ಕೂಡಿಗೆ ಪಟ್ಟಣವಾಗಿ ಬೆಳವಣಿಗೆ ಹೊಂದಿದ್ದು ಸರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಜನವಸತಿಯನ್ನು ಈ ಪ್ರದೇಶ ಒಳಗೊಂಡಿದೆ.
ಕುಶಾಲನಗರ ಪಟ್ಟಣ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದಲ್ಲಿ ಕೂಡಿಗೆಯ ಹಾರಂಗಿ ನದಿಯ ಸೇತುವೆಯ ಒಳ ವ್ಯಾಪ್ತಿಯ ಎಲ್ಲಾ ಪ್ರದೇಶ ನಗರಸಭೆಗೆ ಸೇರಲಿದೆ.‌ ಈ ಆಸ್ಪತ್ರೆಗೆ ಕೊಡಗಿನ ಮಂದಿ ಅಲ್ಲದೇ ನೆರೆಯ ಮೈಸೂರು ಜಿಲ್ಲೆಯ ಗಡಿಯ ಹತ್ತಾರು ಗ್ರಾಮಗಳ ನೂರಾರು ಮಂದಿ ಚಿಕಿತ್ಸೆಗೆ ಧಾವಿಸುತ್ತಿದ್ದಾರೆ. ಹಾಗಾಗಿ ಪ್ರಸಕ್ತ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಗಳ ಕೊರತೆ ಇದ್ದು ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ.
ಅಲ್ಲದೇ, ಇದೇ ಕೂಡಿಗೆ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಕೊಡಗು ಜಿಲ್ಲೆಯ ಪ್ರಮುಖವಾದ ಕೈಗಾರಿಕಾ ಬಡಾವಣೆ ಕೂಡ್ಲೂರು ಗ್ರಾಮದಲ್ಲಿದ್ದು, ಅಲ್ಲಿನ 50 ಕ್ಕೂ ಹೆಚ್ಚಿನ ವಿವಿಧ ಕೈಗಾರಿಕೆಗಳನ್ನು ಸಾವಿರಾರು ಮಂದಿ ಗ್ರಾಮೀಣ ಪ್ರದೇಶಗಳ ಬಡ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ಅನಾರೋಗ್ಯ ಪೀಡಿತರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆಗೆ
ಕೂಡಲೇ ಅಗತ್ಯ ವೈದ್ಯರು ಹಾಗೂ ದಾದಿಯರನ್ನು ನೇಮಿಸಬೇಕು. ಹಾಗೆಯೇ ಮುಂದಿನ ದಿನಗಳಲ್ಲಿ ಶೀಘ್ರವಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಪ್ರಪಂಚಾಯ್ತಿ ಅಧ್ಯಕ್ಷ ಭಾಸ್ಕರ್ ನಾಯಕ್l ಆಗ್ರಹಿಸಿದರು.
ಇದೇ ಸಂದರ್ಭ ಸ್ಥಳೀಯ ಶಾಸಕ ಡಾ.ಮಂಥರಗೌಡ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಮಂಜುನಾಥ್ ಮಂಜುನಾಥ್ ಗುಂಡೂರಾವ್ ಮುಖಂಡರಾದ ಕೆ.ಕೆ.ಮಂಜುನಾಥ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಪಿ ಚಂದ್ರಕಲಾ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!