ಕುಶಾಲನಗರ, ಏ 08: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಮಾವಿನಹಳ್ಳದಲ್ಲಿ ಇರುವ ಟ್ರಾನ್ಸ್ಫರ್ಮರ್ ನಲ್ಲಿ ಕಳೆದ ಕೆಲವು ತಿಂಗಳಿಂದ ಸಮಸ್ಯೆ ಇದ್ದು, ಮಾವಿನಹಳ್ಳ ಹಾಗೂ ಕಬ್ಬಿನಗದ್ದೆ ಭಾಗದ ಮನೆಗಳಿಗೆ ಸೇರಿಯಾದ ವೋಲ್ಟೇಜ್ ಸಪ್ಲೈ ಆಗದ ಕಾರಣ, ಈ ಹಿಂದೆ ಇದ್ದ 25kW ಟಿಸಿಯನ್ನು 63kW ಗೆ ಬದಲಿಸಲಾಯಿತು. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ರಕ್ಷಿತ್ ಮಾವಜಿ ಅವರ ಪ್ರಯತ್ನಕ್ಕೆ ಮತ್ತು TC ಯನ್ನು ಅಳವಡಿಸಲು ಸಹಕರಿಸಿದ ವಿದ್ಯುತ್ ನಿಗಮದ ಅಭಿಯಂತರರು ಹಾಗೂ ಲೈನ್ ಮ್ಯಾನ್ ಅವರಿಗೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಸ್ಥಳೀಯರಾದ ರಾಜೇಶ್ ಮಾವಜಿ, ರಾಜೇಶ್ ತಂಟೆಪಾಡಿ, ಮಾವಜಿ ಚಂದ್ರಶೇಖರ್ ಉಪಸ್ಥಿತರಿದ್ದರು.
Back to top button
error: Content is protected !!