ಕುಶಾಲನಗರ, ಅ 19: ಜಿಲ್ಲೆಯ ಐತಿಹಾಸಿಕ ರಥೋತ್ಸವ ಎಂದೇ ಹೆಸರಾಗಿರುವ ಸುಮಾರು ನಾನೂರು ವರ್ಷಗಳ ಇತಿಹಾಸವಿರುವ ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಜಾತ್ರೋತ್ಸವಕ್ಕೂ ಐತಿಹಾಸಿಕ ಹಿನ್ನೆಲೆಯಿದೆ. ಸುಮಾರು ನಾಲ್ಕು ದಶಕಗಳಿಂದಲೂ ಸಾಂಪ್ರದಾಯಿಕವಾಗಿ, ವಿಜೃಂಭಣೆಯಿಂದ ಜಾತ್ರೋತ್ಸವ ನಡೆಯುತ್ತಿದೆ. ದಿನ ಕಳೆದಂತೆ ಕುಶಾಲನಗರ ಜಾತ್ರೋತ್ಸವ ಯುವಜನೋತ್ಸವವಾಗಿ ಬದಲಾಗುತ್ತಿದೆ. ಉತ್ಸವದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟ ನಡೆಯುತ್ತಿವೆ. ಈ ಬಾರಿಯ ಕುಶಾಲನಗರ ಜಾತ್ರೆಯನ್ನು ವಿಜೃಂಭಣೆಯಿಂದ ಮತ್ತು ವೈಭವಯುತವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಜಾತ್ರೆಗೆ ಹೊಸ ಆಯಾಮ ನೀಡಲಾಗುತ್ತದೆ. ಈ ಬಾರಿ ಗೆಳೆಯರ ಬಳಗ ಜಾತ್ರೋತ್ಸವದ ಉಸ್ತುವಾರಿ ವಹಿಸಿಕೊಂಡಿದ್ದು, ದಸರಾ ಮಾದರಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಗೆಳೆಯರ ಬಳಗದ ಅಧ್ಯಕ್ಷ ವಿ.ಎಸ್. ಆನಂದ್ ಕುಮಾರ್ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕುಶಾಲನಗರದ ಮುಖ್ಯ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವುದು ಕೊಪ್ಪ ಸೇತುವೆಯಿಂದ ತಾವರೆ ಕೆರೆಯವರೆಗೆ ದೀಪಾಲಂಕಾರ ಮಾಡುವುದು. ನಗರದ ವಿವಿಧೆಡೆ ಮುಖ್ಯ ದ್ವಾರಗಳನ್ನು ನಿರ್ಮಿಸುವುದು. ಪ್ರಮುಖ ವೃತ್ತಗಳನ್ನು ದೀಪಗಳಿಂದ ಆಕರ್ಷಕವಾಗಿ ಕಾಣುವಂತೆ ಮಾಡುವ ಕುರಿತಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದ ಕುಶಾಲನಗರ, ಜಾತ್ರೋತ್ಸವ ನವ ವಧುವಿನಂತೆ ಸಿಂಗಾರಗೊಳ್ಳಲಿದೆ. ಎಲ್ಲರ ಒಳಗೊಳ್ಳುವಿಕೆಯಿಂದ ಈ ಭಾರಿಯ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಹಾಗಾಗಿ ಈ ಬಾರಿ ಜಾತ್ರೋತ್ಸವ ಹೇಗಿರಲಿದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ಈ ಸಂದರ್ಭ ಗೆಳೆಯರ ಬಳಗದ ಪ್ರಮುಖರಾದ ಚಂದ್ರು, ರಾಕೇಶ್, ರಘು, ರಜಾಕ್, ವಿಶ್ವಗಿರಿ, ಹೆಚ್.ಟಿ. ವಸಂತ್, ರಜಾಕ್, ಅಯೂಬ್, ಆದಂ, ಕಮರುದ್ದೀನ್, ಮುಸ್ತಫಾ ಸೇರಿದಂತೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
Back to top button
error: Content is protected !!