ಕುಶಾಲನಗರ, ಡಿ 30: ಮಾದಾಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು.
ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾಳೆ ನಿವೃತ್ತಿಯಾಗಲಿರುವ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಹೆಚ್.ಆರ್.ರಾಜು ಸೇರಿದಂತೆ ಸದರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಇತರೆಡೆಗೆ ತೆರಳಿರುವ ಹಿರಿಯ ಶಿಕ್ಷಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್ ಕುಶಾಲಪ್ಪ, ಸದಸ್ಯ ಶಿವಪ್ಪ ಸೇರಿದಂತೆ ಹಳೆ ವಿದ್ಯಾರ್ಥಿ ಸಂಘದ ಮಂಜುನಾಥ್, ವೆಂಕಟೇಶ್, ಉದಯ, ಹರಿನಾರಾಯಣ, ಗಜೇಂದ್ರ, ಚಂದ್ರು, ಲೋಕೇಶ್, ಚಂದ್ರು, ಎಂ.ಆರ್.ಹರೀಶ್, ಎಂ.ಪಿ.ಸಿದ್ದರಾಜು ಹಾಗೂ ಸಂಗಡಿಗರು, ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!