ಧಾರ್ಮಿಕ

ಕುಶಾಲನಗರದಲ್ಲಿ ದೇವಾಂಗ ಜ್ಯೋತಿಗೆ ಸ್ವಾಗತ

ಕುಶಾಲನಗರ, ಏ. 4: ಅಖಿಲ ಭಾರತ ದೇವಾಂಗ (ನೇಕರ)ಜಾಗೃತ ಸಮಾವೇಶ2026. ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ. ಶ್ರೀ.ದಯಾನಂದಪುರಿ ಮಹಾ ಸ್ವಾವಿಗಳ 36. ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಮತ್ತು ಜಗದ್ಗುರುಗಳ ತುಲಾಭಾರ ಸಮಾರಂಭವು ಮೇ. 9. ಮತ್ತು 10. ರಂದು ಬಾಗಲಕೋಟೆ ಜಿಲ್ಲೆಯ ಬದಾವಿ ತಾಲ್ಲೂಕಿನ ಬನಶಂಕರಿ ಕ್ಷೇತ್ರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ “ಬೆಳಗಲೆಮ್ಮ ದೇವಾಂಗ ತತ್ವಮತ ” ಎಂಬ ನಾಮಕಿಂತದೊಂದಿಗೆ ದೇವಾಂಗ ಜ್ಯೋತಿಯ ಹೊತ್ತ ವಾಹನವನ್ನು ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿಯ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕುಶಾಲನಗರದ ರಥಬೀದಿಯಲ್ಲಿರುವ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ದೇವಾಂಗ ಜ್ಯೋತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನ ಆವರಣದಲ್ಲಿ ದೇವಾಂಗ ಜ್ಯೋತಿಯ ವಿಷಯದ ಬಗ್ಗೆ ಬನಶಂಕರಿ ಕ್ಷೇತ್ರದ ಪ್ರಮುಖರಾದ ಡಾ. ಯಲ್ಲಪ್ಪ ರವರು ಸವಿಸ್ತಾರವಾದ ಮಾಹಿತಿಯನ್ನು ಒದಗಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ನೇಕಾರ ಒಕ್ಕೂಟದ ಅಧ್ಯಕ್ಷ ಟಿ‌.ಕೆ. ಪಾಂಡುರಂಗ , ಕಾರ್ಯದರ್ಶಿ ಕೆ.ಕೆ. ನಾಗರಾಜಶೆಟ್ಟಿ, ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಡಿ‌.ವಿ. ರಾಜೇಶ್, ಗೌರವಾಧ್ಯಕ್ಷ ಡಿ‌ . ವಿಜಯೇಂದ್ರ, ಸಮಿತಿ ಪ್ರಮುಖರಾದ ಡಿ‌. ವಿ. ಚಂದ್ರು ( ರಾಕಿ) ರಾಮಚಂದ್ರ,ಅರುಣ್, ಗಣೇಶ್, ಶಾರಧ,ಗೀತಾ ಸೋಮಶೇಖರ್, ರೂಪ ಕುಮಾರ್, ಮಂಜಳಾ ಗೋಪಾಲ್, ಶೋಭಾ ಕನಕ, ಸೇರಿದಂತೆ ಸಮಿತಿ ಸದಸ್ಯರು, ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!