ಧಾರ್ಮಿಕ

ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ

ಕುಶಾಲನಗರ,‌ ಮಾ 28:ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ರಾಮನವಮಿ ಮತ್ತು ಶ್ರೀದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ದೇವಸ್ಥಾನದ ಸಭಾಂಗಣದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರಧ್ಧಾಭಕ್ತಿಯಿಂದ ಆಚರಿಸಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್ ಮಾತನಾಡಿ, ದೇವಾಂಗ ಕುಲಪುರುಷ ದೇವಾನುದೇವತೆಗಳಿಗೆ ಉಡುಪನ್ನು ನೈದುಕೊಟ್ಟವ ಹಾಗೂ ತನ್ನ ವಚನಗಳ ಮೂಲಕ ಸಮಾಜದ ಅಂಕುಡೊಂಕನ್ನು ತಿದ್ದಿದ ಅಧ್ಯವಚನಕಾರ ದೇವರ ದಾಸಿಮಯ್ಯ ಎಂದು ಬಣ್ಣಿಸಿದರು. ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ .ಡಿ .ವಿಜಯೇಂದ್ರ , ಉಪಾಧ್ಯಕ್ಷ ಡಿ.ಆರ್.ಸೋಮಶೇಖರ್, ಡಿ.ವಿ. ಚಂದ್ರು,(ರಾಕಿ), ಕಾರ್ಯದರ್ಶಿ ಕೃಷ್ಣ ಕುಮಾರ್, ಖಜಾಂಚಿ ಡಿ. ಜಿ. ಪ್ರದೀಪ್, ಪ್ರಮುಖರಾದ ಡಿ. ಎಸ್. ಮಹೇಶ್, ಚಂದ್ರು, ಆನಂದ್, ಪುನೀತ್, ಕಿರಣ್ ಕುಮಾರ್, ನಿರಂಜನ್ , ಗೋಪಾಲ,
ಮಹಿಳಾ ಸಮಿತಿಯ ಅಧ್ಯಕ್ಷೆ ಪದ್ಮ ಮಹೇಶ,ಕಾರ್ಯದರ್ಶಿ ದಿವ್ಯ ಅನಿಲ್, ಖಜಾಂಚಿ ರೂಪ ಕುಮಾರ್, ಗೀತಾ ಸೋಮಶೇಖರ, ಶೋಭಾ ಸೋಮಶೆಟ್ಟಿ, ಹಾಗೂ ಯುವಕ ಸಂಘದ ಗಣೇಶ್ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.

ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದವರಿಗೆ ಶ್ರೀ ರಾಮನವಮಿ ಅಂಗವಾಗಿ ಕೋಸಂಬರಿ, ಪಾನಕಗಳ ವಿತರಣೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!