ಕುಶಾಲನಗರ, ಆ 09: ಕುಶಾಲನಗರದ ಶ್ರೀ ಭಗೀರಥ ಉಪ್ಪಾರ ಯುವಕ ಸಂಘ ಮತ್ತು ಶ್ರೀ ಆದಿಶಕ್ತಿ ಅಂತರಘಟ್ಟೆಯಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತ್ಯೋತ್ಸವ ಆಚರಣೆ ನಡೆಯಿತು. ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಮುದಾಯ ಬಾಂಧವರು ರಾಜಕೀಯವಾಗಿ ಸಾಧನೆ ತೋರುವಂತಾಗಬೇಕು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 4 ಮಂದಿ ಸಮುದಾಯದವರು ಎಂಎಲ್ ಎ ಗಳಾಗಿ ಚುನಾಯಿತರಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಕುಶಾಲನಗರದಲ್ಲಿ ಸಮುದಾಯ ಬಾಂಧವರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಶಾಸಕರು, ಸಂಸದರ ನಿಧಿಯಿಂದ 35 ಲಕ್ಷ ರೂ ಸೇರಿದಂತೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಡಿ.ಜಗನ್ನಾಥ್ ಸಾಗರ್ ಮುಖ್ಯ ಭಾಷಣ ಮಾಡಿದರು. ಸಮುದಾಯ ಬಾಂಧವರು ಶಿಕ್ಷಣಕ್ಕೆ ಒತ್ತು ನೀಡಿ ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕರೆ ನೀಡಿದರು.
ಕೊಡಗು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡ ಉಪ್ಪಾರ ಸಮುದಾಯದವರು ಬ್ರಿಟಿಷರ ಗುಂಡಿಗೆ ಬಲಿಯಾದರು. ಸ್ವಾತಂತ್ರ್ಯ ಹೋರಾಟದಲ್ಲಿ ಉಪ್ಪಾರ ಜನಾಂಗದ ಪಾತ್ರ ಬೆಳಕಿಗೆ ಬಾರದೆ ಮರೆಯಾಗಿ ಹೋಗಿರುವುದು ದುರಂತ ಎಂದರು. ಉಪ್ಪಾರ ಜನಾಂಗ ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು. ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, ಕುಶಾಲನಗರದಲ್ಲಿ ಉಪ್ಪಾರ ಸಂಘಕ್ಕೆ ಅಗತ್ಯ ಸಹಕಾರವನ್ನು ಪಪಂ ಆಡಳಿತ ಮಂಡಳಿ ಮಾಡಲಿದೆ ಎಂದರು.
ಉಪ್ಪಾರ ಯುವಕ ಸಂಘದ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ನೌಕರರ ವೃತ್ತಿಪರರ ಸಂಘದ ಅಧ್ಯಕ್ಷ ಜವರಶೆಟ್ಟಿ, ಉಪಾಧ್ಯಕ್ಷ ಶಿವು, ಪಿರಿಯಾಪಟ್ಟಣದ ಅಧ್ಯಕ್ಷ ಪಿ.ಎಲ್.ರಾಮಣ್ಣ, ಪಿಡಿಒ ಮಂಜುನಾಥ್, ಮಡಿಕೇರಿ ವಾಣಿಜ್ಯ ತೆರಿಗೆ ಇಲಾಖೆಯ ಕಳಸೇಗೌಡ, ಮೈಸೂರು-ಚಾಮರಾಜನಗರ ಸಂಘದ ವಿಷಕಂಠಯ್ಯ, ಉಪ್ಪಾರ ಯುವಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಿ.ಸಿ.ಗೋವಿಂದರಾಜು, ಗೌರವಾಧ್ಯಕ್ಷ ಬಿ.ಎಸ್.ಪರಮೇಶ್ ಸಾಗರ್, ಆದಿಶಕ್ತಿ ಅಂತರಘಟ್ಟೆಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಸಂಜೀವ, ಯುವಕ ಸಂಘದ ಉಪಾಧ್ಯಕ್ಷ ಬಿ.ವಿ.ಗಿರೀಶ್, ಕಾರ್ಯದರ್ಶಿ ಬಿ.ಎನ್.ಜಗದೀಶ್, ಖಜಾಂಚಿ ಗಜೇಂದ್ರ ಮತ್ತಿತರ ಪ್ರಮುಖರು ಇದ್ದರು.
ಅಭಿವೃದ್ಧಿ ನಿಗಮದ ಗಿರೀಶ್ ಉಪ್ಪಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಸಮುದಾಯ ಬಾಂಧವರು ಆದಿಶಕ್ತಿ ಅಂತರಘಟ್ಟೆಯಮ್ಮ ದೇವಾಲಯದಿಂದ ಕಳಸ ಹೊತ್ತು ಸಭಾಂಗಣದವರೆಗೆ ಭಗೀರಥ ಭಾವಚಿತ್ರವನ್ನು ಮೆರವಣಿಗೆ ನಡೆಸಿದರು. ಸಭಾಂಗಣದಲ್ಲಿ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕಾವೇರಿಗೆ ಬಾಗಿನ: ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ್ ಅವರು ಕುಶಾಲನಗರ ಕಾವೇರಿ ಸೇತುವೆ ಬಳಿ ಕಾವೇರಿ ಮಾತೆಗೆ ಮಾಲಾರ್ಪಣೆ ಮಾಡಿ ತುಂಬಿದ ಕಾವೇರಿಗೆ ಬಾಗಿನ ಅರ್ಪಿಸಿದರು.
Back to top button
error: Content is protected !!