ಪ್ರಕಟಣೆ

ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ 81.15. ಲಕ್ಷ ಲಾಭಾಂಶ.

ಕುಶಾಲನಗರ, ಆ. 25: ಕೂಡಿಗೆಯಲ್ಲಿರುವ ನಂ 242 ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024- 25. ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಯ ವ್ಯವಹಾರದಲ್ಲಿ ಈ ಸಾಲಿನಲ್ಲಿ ಸಂಘವು 81.15 ಲಕ್ಷ ಲಾಭಾಂಶ ಗಳಿಸಿದೆ.
2024-25. ನೇ ಸಾಲಿಗೆ ಸದಸ್ಯರ ಪಾಲು ಬಂಡವಾಳ 432.77. ಲಕ್ಷ ಗಳಿದ್ದು,ಇದರಲ್ಲಿ ಠೇವಣಿ 2520.36. ಲಕ್ಷ ಗಳಿದೆ. ಇದರಲ್ಲಿ ಕೃಷಿ ಸಾಲವಾಗಿ 893.88 ಲಕ್ಷ ಹಣವನ್ನು ಸಾಲವಾಗಿ ನೀಡಲಾಗಿದೆ. ಕೃಷಿ ಮಧ್ಯಾವಧಿ ಸಾಲವಾಗಿ 6. 89. ಲಕ್ಷ, ಜಾಮೀನು ಸಾಲವಾಗಿ 687.71. ಲಕ್ಷ, ನಿರಖು ಠೇವಣಿ 15.16.ಲಕ್ಷ, ಪಿಗ್ಮಿಠೇವಣಿಯಾಗಿ 1.65.ಲಕ್ಷ, ಹಾಗೂ ಸ್ವಸಹಾಯ ಗುಂಪುಗಳಿಗೆ 41.65. ಲಕ್ಷ ಆಭರಣ ಸಾಲವಾಗಿ 168.50. ಲಕ್ಷ, ವ್ಯಾಪಾರಾಭೀವೃದ್ದಿಗೆ 305.61.ಲಕ್ಷ , ಜಂಟಿ ಭಾಧ್ಯತ ಗುಂಪುಗಳಿಗೆ 26. ಲಕ್ಷ, ಪಿಗ್ಮಿ ಸಾಮಾನ್ಯ ಸಾಲವಾಗಿ 1793 .ಲಕ್ಷ, ಗೊಬ್ಬರ ಸಾಲವಾಗಿ 9.73 ಲಕ್ಷ, ಒಟ್ಟು 3.ಕೋಟಿ,951.29. ಲಕ್ಷ . ಸಾಲ ಸೌಲಭ್ಯಗಳ ವ್ಯವಹಾರಗಳನ್ನು ನಡೆಸುವ ಮೂಲಕ ರೈತರಿಗೆ ಸಹಕಾರಿಯಾಗುವುದರ ಮೂಲಕ ಸಂಘವು 2024-25 ಸಾಲಿನಲ್ಲಿ ‌ 81. ಲಕ್ಷದ 15.ಸಾವಿರದಷ್ಟು ಲಾಭಾಂಶ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!